Share this news

ಲಾಹೋರ್  : ಖಲಿಸ್ತಾನಿ ಉಗ್ರ ಪರಮ್​ಜಿತ್ ಸಿಂಗ್​ನನ್ನುಲಾಹೋರ್ ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ವಾಂಟೆಡ್ ಖಲಿಸ್ತಾನಿ ಭಯೋತ್ಪಾದಕ ಪರಮ್​ಜಿತ್ ಸಿಂಗ್​ ಬೆಳಗ್ಗೆ ವಾಕಿಂಗ್​ ತೆರಳಿದ್ದಾಗ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

63 ವರ್ಷದ ಸಿಂಗ್  ಖಲಿಸ್ತಾನ್ ಕಮಾಂಡೋ ಫೋರ್ಸ್-ಗುಂಪಿನ ಮುಖ್ಯಸ್ಥರಾಗಿದ್ದರು. ಜುಲೈ 2020 ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿ ಭಾರತವು ಅವರನ್ನು ಭಯೋತ್ಪಾದಕ ಎಂದು ಹೆಸರಿಸಿತ್ತು.ಅಪರಿಚಿತ ಬಂದೂಕುಧಾರಿಗಳು ಅವರ ತಲೆಗೆ ಗುಂಡು ಹಾರಿಸಿದ್ದಾರೆ. ISI, ಮಿಲಿಟರಿ ಗುಪ್ತಚರ (MI) ಮತ್ತು ಭಯೋತ್ಪಾದನಾ ನಿಗ್ರಹ ಇಲಾಖೆ (CTD) ಸೇರಿದಂತೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಈ ಪ್ರದೇಶವನ್ನು ಸುತ್ತುವರೆದಿವೆ ಮತ್ತು ತನಿಖೆ ಆರಂಭಿಸಿದ್ದಾರೆ.

ಈ ವರ್ಷದ ಫೆಬ್ರವರಿಯಲ್ಲಿ, ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್‌ನ ಸ್ವಯಂಘೋಷಿತ ಕಮಾಂಡರ್ ಬಶೀರ್ ಅಹ್ಮದ್ ಪೀರ್ ಅವರನ್ನು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಅದೇ ತಿಂಗಳಲ್ಲಿ, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಅಲ್ ಬದ್ರ್‌ನ ಮಾಜಿ ಕಮಾಂಡರ್ ಸೈಯದ್ ಖಾಲಿದ್ ರಜಾ ಅವರನ್ನು ಕರಾಚಿಯ ಅವರ ನಿವಾಸದ ಹೊರಗೆ ಇದೇ ರೀತಿಯಲ್ಲಿ ಹತ್ಯೆ ಮಾಡಲಾಗಿತ್ತು. ಗುಂಡು ಹಾರಿಸಿದ ನಂತರ, ಆಕ್ರಮಣಕಾರನು ಸೊಸೈಟಿಯ ಗೇಟ್‌ಗೆ ಧಾವಿಸಿ ಹೊರಗೆ ತನಗಾಗಿ ಕಾಯುತ್ತಿದ್ದ ತನ್ನ ಸಹಚರನೊಂದಿಗೆ ಓಡಿಹೋಗಿದ್ದ.

Leave a Reply

Your email address will not be published. Required fields are marked *