ದೆಹಲಿ : ರಾಜ್ಯದಲ್ಲಿ ಹಿಂದುಳಿದ ವರ್ಗದ (ಒಬಿಸಿ) ಅಡಿಯಲ್ಲಿ ಮೀಸಲಾತಿಯನ್ನು ಹೊಂದಿದ್ದ ಮುಸ್ಲಿಂ ಸಮುದಾಯದ ಮೀಸಲಾತಿ ತೆಗೆದುಹಾಕಿ ಆರ್ಥಿಕ ಹಿಂದುಳಿದ ವರ್ಗದ ಮೀಸಲಾತಿಗೆ ಸೇರ್ಪಡೆ ಮಾಡಿದ್ದ ಕರ್ನಾಟಕ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಇದನ್ನೇ ಯಥಾಸ್ಥಿತಿಯಲ್ಲಿ ಕಾಯ್ದಿಡುವಂತೆ ಮತ್ತೊಮ್ಮೆ ಆದೇಶಿಸಿದೆ
ರಾಜ್ಯ ಸರ್ಕಾರದಿಂದ ರದ್ದುಗೊಳಿಸಲಾಗಿದ್ದ ಮುಸ್ಲಿಂ ಸಮುದಾಯದ ಒಬಿಸಿ ಮೀಸಲಾತಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿತ್ತು. ಈ ಕುರಿತು ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರದ ಆದೇಶಕ್ಕೆ ಏ.25 ರಂದು ತಡೆ ನೀಡಿತ್ತು. ಜೊತೆಗೆ, ಇಂದು (ಮೇ 9- ಮಂಗಳವಾರ) ಪ್ರಕರಣವನ್ನು ನ್ಯಾ.ಕೆ.ಎಂ.ಜೋಸೆಫ್ ನೇತೃತ್ವದ ಪೀಠದಲ್ಲಿ ವಿಚಾರಣೆ ಮಾಡಲಾಗಿದ್ದು, ಈ ಹಿಂದಿನ ಆದೇಶವನ್ನು ಮುಂದುವರೆಸುವ ಹಾಗೂ ಮೀಸಲಾತಿ ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಲಾಗಿದೆ.