Share this news

ಬೆಂಗಳೂರು: ನಾಳೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ನಾಳೆ ನಡೆಯಲಿರುವ ವಿಧಾನಸಭಾ ಚುನಾವಣೆಯ ಮತದಾನಕ್ಕೆ  ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.ಈ ಕುರಿತು ಕರ್ನಾಟಕ ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದೆ.

 ನಾಳೆ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 5,30,85,566 ಸಾಮಾನ್ಯ ಮತದಾರರು ಮತ ಚಲಾಯಿಸಲಿದ್ದಾರೆ. 10.05.2023 ರಂದು 37,777 ಸ್ಥಳಗಳಲ್ಲಿ 58,545 ಮತದಾನ ಕೇಂದ್ರಗಳಲ್ಲಿ. ಈ ಪೈಕಿ 11,71,558 ಯುವ ಮತದಾರರು ಮತ್ತು 12,15,920 80+ ವಯಸ್ಸಿನ ಮತದಾರರು. ಮತ ಚಲಾಯಿಸಲಿದ್ದಾರೆ.  ಅಲ್ಲದೆ 5,71,281 ಪಿಡಬ್ಲ್ಯೂಡಿ ಮತದಾರರು. ಮತದಾನ ಪ್ರಕ್ರಿಯೆಗಳಿಗಾಗಿ ಸುಮಾರು 4,00,000 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಎಲ್ಲಾ 224 ವಿಧಾನಸಭೆಯ ಮಸ್ಟರಿಂಗ್ ಕೇಂದ್ರಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳು ಸೇರಿದಂತೆ ಎಲ್ಲಾ ವಸ್ತುಗಳನ್ನು ಒದಗಿಸಲಾಗುತ್ತಿದೆ. ಅವುಗಳನ್ನು ಆಯಾ ಮತದಾನ ಕೇಂದ್ರಗಳಿಗೆ ಸಾಗಿಸಲಾಗುವುದು. ಭದ್ರತಾ ಸಿಬ್ಬಂದಿಯೊಂದಿಗೆ  ಅಧಿಕಾರಿಗಳು ಅವುಗಳನ್ನು ಕೊಂಡೊಯ್ಯಲಿದ್ದಾರೆ . 84,119 ರಾಜ್ಯ ಪೊಲೀಸ್ ಅಧಿಕಾರಿಗಳು ಮತ್ತು 58,500 ಸಿಎಪಿಎಫ್ ಪೊಲೀಸರು 650 ಸಿಒವೈಗಳನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಈ ಮೂಲಕ ರಾಜ್ಯಾದ್ಯಂತ ಮತದಾನದ ದಿನದಂದು ಕಾನೂನು ಮತ್ತು ಸುವ್ಯವಸ್ಥೆ ಮತ್ತು ಭದ್ರತಾ ಕಾರ್ಯ ಕೈಗೊಳ್ಳಲಾಗಿದೆ.

185 ಅಂತರರಾಜ್ಯ ಗಡಿ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. 100 ಅಬಕಾರಿ ಅಂತರರಾಜ್ಯ ಗಡಿ ಚೆಕ್ ಪೋಸ್ಟ್ ಗಳು ಸಹ ಕಾರ್ಯನಿರ್ವಹಿಸುತ್ತಿವೆ. ಎಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ.  185 ಚೆಕ್ ಪೋಸ್ಟ್ ಗಳು ಮತ್ತು 75 ಅಬಕಾರಿ ಚೆಕ್ ಪೋಸ್ಟ್ ಗಳಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ .

ಅಂತರರಾಜ್ಯ ಗಡಿಯಲ್ಲಿ 190 ಪೊಲೀಸ್, 18 ಅಬಕಾರಿ, 33 ಕಮರ್ಷಿಯಲ್ ಟ್ಯಾಕ್ಸ್ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಈ ಮೂಲಕ ಅಕ್ರಮಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮಹಾರಾಷ್ಟ್ರ ಗಡಿಯಲ್ಲಿ 53 ಪೊಲೀಸ್ ಚೆಕ್ ಪೋಸ್ಟ್, ಗೋವಾದಲ್ಲಿ 05 ಪೊಲೀಸ್, 03 ಅಬಕಾರಿ ಹಾಗೂ 3 ಕಮರ್ಷಿಯಲ್ ಟ್ಯಾಕ್ಸ್ ಟೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಆಂಧ್ರಪ್ರದೇಶದಲ್ಲಿ 57 ಪೊಲೀಸ್ ಚೆಕ್ ಪೋಸ್ಟ್, ತೆಲಂಗಾಣ 30 ಪೊಲೀಸ್, 5 ಅಬಕಾರಿ, 11 ಕಮರ್ಷಿಯಲ್ ಟ್ಯಾಕ್ಸ್ ಚೆಕ್ ಪೋಸ್ಟ್ ತೆರೆಯಲಾಗಿದೆ.

ತಮಿಳುನಾಡಿನಲ್ಲಿ 25 ಪೊಲೀಸ್, 2 ಅಬಕಾರಿ, 5 ಕಮರ್ಷಿಯಲ್ ಟ್ಯಾಕ್ಸ್ ಟೆಕ್ ಪೋಸ್ಟ್ ತೆರೆಯಲಾಗಿದೆ. ಕೇರಳದಲ್ಲಿ 20 ಪೊಲೀಸ್, 8 ಅಬಕಾರಿ, 14 ಕಮರ್ಷಿಯಲ್ ಚೆಕ್ ಪೋಸ್ ತೆರೆದು ಅಕ್ರಮ ಹಣ, ಮದ್ಯ ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ .

Leave a Reply

Your email address will not be published. Required fields are marked *