Share this news

ಶಿವಮೊಗ್ಗ (ಮೇ.15): ಕಜಿಕಿಸ್ತಾನದಿಂದ ಬೆದರಿಕೆ ಕರೆ ಎಂದು ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್  ಅವರಿಗೆ  ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ದೂರು ನೀಡಿದ್ದಾರೆ.

ಕಳೆದ ರಾತ್ರಿ ಮತ್ತು ಬೆಳಗ್ಗೆ  ಕಜಿಕಿಸ್ತಾನದಿಂದ ಹಲವು ಬಾರಿ ಕರೆ ಬಂದಿದ್ದು ವಿಚಾರಣೆ ನಡೆಸಲು ದೂರು ನೀಡಲಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಗೆ ಬೆದರಿಕೆ ಕರೆ ಮಾಡಿದ್ದ ಸಾಹಿಲ್ ಶೇಖ್ ವಿಚಾರಣೆ ಮೇಲೆ ಪಿಎಫ್ ಐ ವತಿಯಿಂದ ತಮ್ಮನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದಾರೆ ಎನ್ನುವ ಬಗ್ಗೆ ದೂರಿನಲ್ಲಿ ಪ್ರಸ್ತಾಪವಾಗಿದೆ.

 ಈ ಬಗ್ಗೆ ಶಿವಮೊಗ್ಗದಲ್ಲಿ ಎಸ್ಪಿ ಮಿಥುನ್ ಕುಮಾರ್ ಹೇಳಿಕೆ ನೀಡಿದ್ದು, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಬೆದರಿಕೆ ಕರೆ ಹಿನ್ನೆಲೆ ದೂರು ನೀಡಿದ್ದಾರೆ. ಕಜಿಕಿಸ್ತಾನದಿಂದ ತಮಗೆ ಬೆದರಿಕೆ ಕರೆ ಬಂದಿದೆ. ರಾತ್ರಿ ಮತ್ತು ಬೆಳಗ್ಗೆ ಮೊಬೈಲ್‌ ಗೆ ಹಲವು ಬಾರಿ ಕರೆ ಬಂದ ಬಗ್ಗೆ ದೂರಿನಲ್ಲಿ ತಿಳಿಸಿದ್ದಾರೆ. ಸಾಹಿಲ್ ಶೇಖ್ ವಿಚಾರಣೆ ವೇಳೆ ತಮ್ಮನ್ನು ಪಿಎಫ್ ಐ  ಹತ್ಯೆ ಮಾಡುವ ಸಂಚು ರೂಪಿಸಿರುವ ವಿಚಾರ ಪ್ರಸ್ತಾಪಿಸಿದ್ದಾರೆ. ಈ ಎಲ್ಲದರ ಬಗ್ಗೆಯೂ ತನಿಖೆ ನಡೆಸಲಾಗುವುದು. ತನಿಖೆ ನಡೆಸಿ ಪ್ರಕರಣದ ಕೂಲಂಕುಶ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.

2019ರಲ್ಲೂ ಸಹ ಈಶ್ವರಪ್ಪನವರಿಗೆ ಬೆದರಿಕೆ ಕರೆ ಬಂದಿತ್ತು. ಅನಾಮಧೇಯ ವ್ಯಕ್ತಿ ಕರೆಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದ. ಉರ್ದು ಮಿಶ್ರಿತ ಕನ್ನಡದಲ್ಲಿ ಮಾತನಾಡಿದ್ದ ಆತ “ಬಿಜೆಪಿ ಸಂಸದ ಸ್ಥಾನಗಳಿಗೆ ಏಕೆ ಮುಸ್ಲಿಮರಿಗೆ ಟಿಕೆಟ್ ಕೊಟ್ಟಿಲ್ಲ? ನಿಮಗೆ ಏನು ಮಾಡಬೇಕೆಂದು ನನಗೆ ಚೆನ್ನಾಗಿ ಗೊತ್ತು” ಎಂದು ಜೀವ ಬೆದರಿಕೆ ಹಾಕಿದ್ದಎಂದು ಸ್ವತಃ ಈಶ್ವರಪ್ಪ ಹೇಳಿದ್ದರು.

Leave a Reply

Your email address will not be published. Required fields are marked *