Share this news

ವದೆಹಲಿ : ಕರ್ನಾಟಕ ಸಿಎಂ ಆಯ್ಕೆ ಇನ್ನೂ ಆಯ್ಕೆಯಾಗಿಲ್ಲ ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ.

ಇಂದು ಅಥವಾ ನಾಳೆ ಸಿಎಂ ಆಯ್ಕೆ ಆಗಲಿದೆ. ಮಲ್ಲಿಕಾರ್ಜುನ ಖರ್ಗೆ ಕಳೆದೆರಡು ದಿನಗಳಿಂದ ಚರ್ಚೆ ನಡೆಸುತ್ತಿದ್ದಾರೆ. ಖರ್ಗೆ ಯಾವುದೇ ನಿಧಾರ ತೆಗೆದುಕೊಳ್ಳಬಹುದು.  ಮೋದಿ ಇಂತಹ ವಿಚಾರದಲ್ಲಿ 10 ರಿಂದ 15 ದಿನ ತೆಗೆದುಕೊಳ್ಳುತ್ತಿದ್ದರು. ಕ್ಯಾಬಿನೆಟ್ ನಲ್ಲಿ 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಪ್ರತೀ ಯೋಜನೆಗಳನ್ನು ಈಡೇರಿಸುತ್ತೇವೆ.  ಮುಂದಿನ 48ರಿಂದ 78 ಗಂಟೆಯೊಳಗೆ ಹೊಸ ಸರಕಾರ ಅಸ್ತಿತ್ವದಲ್ಲಿ ಇರಲಿದೆ  ಎಂದಿದ್ದಾರೆ.

ಈ ಹಿನ್ನಲೆಯಲ್ಲಿ ನಾಳೆ ನೂತನ ಸಿಎಂ ಪ್ರಮಾಣವಚನ ಕಾರ್ಯಕ್ರಮಕ್ಕಾಗಿ ಕಂಠೀರವ ಕ್ರೀಢಾಂಗಣದಲ್ಲಿ ನಡೆಸಲಾಗುತ್ತಿದ್ದ ಸಿದ್ಧತೆಗಳನ್ನು ಈಗ ಸ್ಥಗಿತಗೊಳಿಸಲಾಗಿರುವುದಾಗಿ ತಿಳಿದು ಬಂದಿದೆ.ಈಗಾಗಲೇ ಕಠೀರವ ಕ್ರೀಢಾಂಗಣದಲ್ಲಿ 50,000 ಜನರಿಗೆ ಆಸನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಂಠೀರವ ಕ್ರೀಢಾಂಗಣದಲ್ಲಿ ನೂತನ ಸಂಪುಟ ಸಚಿವರು ಪ್ರಮಾಣವಚನ ಕಾರ್ಯಕ್ರಮ, ಗಣ್ಯರಿಗೆ ಯಾವ ರೀತಿಯ ಆಸನದ ವ್ಯವಸ್ಥೆ, ಭದ್ರತಾ ವ್ಯವಸ್ಥೆಯ ಮಾಡಬೇಕು ಎನ್ನುವ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸಿದ್ದರು.

 

Leave a Reply

Your email address will not be published. Required fields are marked *