Share this news

ಕಾರ್ಕಳ: ದೇಶದಾದ್ಯಂತ ಅದ್ದೂರಿಯಾಗಿ ಪ್ರದರ್ಶನಗೊಳ್ಳುತ್ತಿರುವ ಭಾರೀ ಸಂಚಲ ಮೂಡಿಸಿರುವ ದಿ ಕೇರಳ ಸ್ಟೋರಿ ಎಂಬ ಚಲನಚಿತ್ರವನ್ನು ಕಾರ್ಕಳದ ನಾಗರಿಕರಿಗೆ ಉಚಿತ ವೀಕ್ಷಣೆಗೆ ಹಿಂದೂ ಜಾಗರಣ ವೇದಿಕೆ ಅವಕಾಶ ಕಲ್ಪಿಸಿದೆ.

ಮೇ 21 ಹಾಗೂ 22ರಂದು ಕಾರ್ಕಳದ ಮೂವಿ ಪ್ಲಾನೆಟ್ ನಲ್ಲಿ ಈ ಚಿತ್ರ ಉಚಿತವಾಗಿ ಪ್ರದರ್ಶನಗೊಳ್ಳಲಿದೆ.ಚಿತ್ರಪ್ರದರ್ಶನಕ್ಕೂ ಮುನ್ನ ಶಾಸಕ ಸುನಿಲ್ ಕುಮಾರ್ ಅವರು ಚಿತ್ರ ಮಂದಿರಕ್ಕೆ ಆಗಮಿಸಿ,ದಿ ಕೇರಳ ಸ್ಟೋರಿ ಚಿತ್ರದಲ್ಲಿನ ಕರಾಳ ಘಟನೆಗಳನ್ನು ವಿವರಿಸಿದರು.


ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಮುಖಂಡರಾದ ಮಹೇಶ್ ಶೆಣೈ ಬೈಲೂರು,ಉಮೇಶ್ ನಾಯ್ಕ್ ಸೂಡ,ಯುವ ವಾಹಿನಿ ಸಂಯೋಜಕ ಸುಜಿತ್ ಕುಂದರ್ ಉಪಸ್ಥಿತರಿದ್ದರು.


ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ,ರವೀಂದ್ರ ಮೊಯ್ಲಿ, ವಿಖ್ಯಾತ್ ಶೆಟ್ಟಿ ಸೇರಿದಂತೆ ನೂರಕ್ಕೂ ಅಧಿಕ ಮಂದಿ ಚಿತ್ರವನ್ನು ವೀಕ್ಷಿಸಿದರು

 

Leave a Reply

Your email address will not be published. Required fields are marked *