ಕಾರ್ಕಳ: ಮುಂಗಾರುಪೂರ್ವ ಬಾರೀ ಗಾಳಿಮಳೆಗೆ ಮುಡಾರು ಗ್ರಾಮದ ರಾಮೆಟ್ಟುಪಲ್ಕೆ ನಿವಾಸಿ ಗುಲಾಬಿ ಎಂಬವರ ಮನೆಗೆ ಮರಬಿದ್ದು ಮನೆಯ ಮೇಲ್ಛಾವಣಿಯ ಹೆಂಚು ಹಾಗೂ ತಗಡು ಶೀಟ್ ಹಾನಿಯಾಗಿ ಸುಮಾರು 10 ಸಾವಿರ ನಷ್ಟ ಸಂಭವಿಸಿದೆ.
ಮಂಗಳವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಭಾರೀ ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ಮನೆಯ ಪಕ್ಕದಲ್ಲಿ ಮರ ಮನೆ ಮೇಲೆ ಉರುಳಿಬಿದ್ದಿದೆ. ಗ್ರಾಮ ಕರಣಿಕರಾದ ಬಾಲಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.