Share this news

 

ಕಾರ್ಕಳ : ಪದವಿ ಪೂರ್ವ ಶಿಕ್ಷಣ ಇಲಾಖೆಯು ಹೊರಡಿಸಿದ ಮರು ಮೌಲ್ಯಮಾಪನ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾದ ಶರಣ್ಯ ಎಸ್. ಹೆಗ್ಡೆ ಇಂಗ್ಲೀಷ್‌ನಲ್ಲಿ 2, ಕನ್ನಡದಲ್ಲಿ 1 ಹೆಚ್ಚುವರಿ ಅಂಕ ಪಡೆದು ಒಟ್ಟು 594 ಅಂಕ ದೊಂದಿಗೆ ರಾಜ್ಯಕ್ಕೆ ನಾಲ್ಕನೇ ಹಾಗೂ ಉಡುಪಿ ಜಿಲ್ಲೆಗೆ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ.

ಮರು ಮೌಲ್ಯಮಾಪನದಲ್ಲಿ ಆಕಾಶ್ ಪೈ ಇಂಗ್ಲೀಷ್‌ನಲ್ಲಿ 3, ವ್ಯವಹಾರ ಅಧ್ಯಯನದಲ್ಲಿ 2 ಅಂಕಗಳನ್ನು ಹೆಚ್ಚುವರಿ ಪಡೆದು ಒಟ್ಟು 593 ಅಂಕಗಳನ್ನು ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ರೋಹಿತ್ ಹೆಗ್ಡೆ ಇಂಗ್ಲೀಷ್‌ನಲ್ಲಿ 6, ರಸಾಯನಶಾಸ್ತçದಲ್ಲಿ 3 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದು ಒಟ್ಟು 593 ಅಂಕಗಳೊAದಿಗೆ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ. ಮನೋಜ್ ಎಂ.ಟಿ ರಸಾಯನ ಶಾಸ್ತ್ರ ದಲ್ಲಿ 19 ಹೆಚ್ಚುವರಿ ಅಂಕ ಪಡೆದು 548 ಅಂಕ ಪಡೆದಿದ್ದಾರೆ.

Leave a Reply

Your email address will not be published. Required fields are marked *