ಕಾರ್ಕಳ: ಮುಂಗಾರುಪೂರ್ವ ಮಳೆಯ ಅಬ್ಬರ ಜೋರಾಗಿದ್ದು ಕಾರ್ಕಳ ತಾಲೂಕಿನ ಹಲವೆಡೆ ಬಿರುಗಾಳಿಯಿಂದ ಮನೆ, ಅಡಿಕೆ ತೋಟಗಳಿಗೆ ಭಾರೀ ಹಾನಿಯಾಗಿದೆ. ಮಾಳ ಗ್ರಾಮದಲ್ಲಿ ಮಂಗಳವಾರ ಬೀಸಿದ ಭಾರೀ ಗಾಳಿಗೆ ಸುರೇಂದ್ರ ಪ್ರಭು ಎಂಬವರ ಅಡಿಕೆ ತೋಟದಲ್ಲಿನ ಸುಮಾರು 150 ಅಡಿಕೆ ಮರ ಧರಾಶಾಯಿಯಾಗಿದ್ದು ಸುಮಾರು 50 ಸಾವಿರ ನಷ್ಟ ಸಂಭವಿಸಿದೆ.
ಬೇಸಗೆ ಬಿಸಿಲಧಗೆಗೆ ಅಡಿಕೆ ಫಸಲು ಉದುರಿ ಹೋಗುತ್ತಿದ್ದು ಇತ್ತ ಮಳೆ ಗಾಳಿಯ ಹೊಡೆತಕ್ಕೆ ಅಡಿಕೆ ತೋಟವೇ ನಾಶವಾಗುತ್ತಿದ್ದು ವರ್ಷವಿಡೀ ಶ್ರಮಪಟ್ಟು ಬೆಳೆದ ಬೆಳೆ ಕೈಗೆ ಸಿಗದೇ ರೈತರು ಕಂಗಾಲಾಗಿದ್ದಾರೆ.