ಬೆಂಗಳೂರು:ಕಳೆದ ಎರಡು ದಿನಗಳಿಂದ ಮುಂದುವರಿಯುತ್ತಿರುವ ಸಚಿವ ಸಂಪುಟ ವಿಸ್ತರಣೆ ಕಸರತ್ತು ಬಹುತೇಕ ಫೈನಲ್ ಆಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು ಇಂದು ಸಂಜೆಯ ವೇಳೆಗೆ ಸಚಿವರ ಪಟ್ಟಿ ಅಂತಿಮವಾಗಲಿದೆ ಎಂದು ತಿಳಿದುಬಂದಿದೆ
ರಾಜ್ಯದ 55ಕ್ಕೂ ಅಧಿಕ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು,ಸಚಿವ ಸ್ಥಾನಕ್ಕಾಗಿ ಭಾರೀ ಲಾಬಿ ನಡೆಸುತ್ತಿದ್ದಾರೆ.ಸಿದ್ದರಾಮಯ್ಯ ಸರ್ಕಾರ ಪ್ರಮಾಣವಚನ ಸ್ವೀಕರಿಸಿ ಒಂದು ವಾರ ಕಳೆದರೂ ಸಚಿವ ಸಂಪುಟ ಕಗ್ಗಂಟು ಮಾತ್ರ ಇನ್ನೂ ಬಗೆಹರಿದಿಲ್ಲ.ಇದೀಗ ಅಳೆದುತೂಗಿ ಕೈ ಹೈಕಮಾಂಡ್ ಕೊನೆಗೂ ಪಟ್ಟಿ ಸಿದ್ದಪಡಿಸಿದ್ದು,24 ಸಂಭಾವ್ಯ ಸಚಿವರ ಪಟ್ಟಿ ಈ ಕೆಳಗಿನಂತಿದೆ
ಎಚ್.ಕೆ. ಪಾಟೀಲ್,ಆರ್.ವಿ ದೇಶಪಾಂಡೆ, ಲಕ್ಷö್ಮಣ ಸವದಿ, ಈಶ್ವರ ಖಂಡ್ರೆ, ಲಕ್ಷಿö್ಮÃ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್,ಬಸವರಾಜ ರಾಯರೆಡ್ಡಿ, ಡಾ. ಮಹಾದೇವಪ್ಪ,ಪಿರಿಯಾಪಟ್ಟಣ ವೆಂಕಟೇಶ್,ಎಸ್.ಎಸ್. ಮಲ್ಲಿಕಾರ್ಜುನನ,ಬೈರತಿ ಸುರೇಶ್,ಕೃಷ್ಣ ಬೈರೇಗೌಡ, ರಹೀಂ ಖಾನ್, ಅಜಯ್ ಸಿಂಗ್,ಪುಟ್ಟರAಗ ಶೆಟ್ಟಿ,ನರೇಂದ್ರ ಸ್ವಾಮಿ,ಎಂ.ಸಿ, ಸುಧಾಕರ್,ಹಿರಿಯೂರು ಸುಧಾಕರ್,ಚೆಲುವರಾಯಸ್ವಾಮಿ,ಮಧು ಬಂಗಾರಪ್ಪ, ಮಾಂಕಾಳ ವೈದ್ಯ,ವಿನಯ ಕುಲಕರ್ಣಿ,ಅನಿಲ್ ಲಾಡ್, ವಿಧಾನ ಪರಿಷತ್ ಸದಸ್ಯ ಬೋಸರಾಜ್ ಹೆರುಗಳನ್ನು ಅಂತಿಮಗೊಳಿಸಲಾಗಿದೆ ಎನ್ನಲಾಗಿದ್ದು,ಕೊನೇಕ್ಷಣದಲ್ಲಿ ಈ ಪಟ್ಟಿಯನ್ನು ಪರಿಷ್ಕರಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಅಳೆದು ತೂಗಿ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿರುವ ಕಾಂಗ್ರೆಸ್ ಹೈಕಮಾಂಡ್ ಹಲವು ಸೂತ್ರಗಳನ್ನು ಅಳವಡಿಕೆ ಮಾಡಿಕೊಂಡು ಶಾಸಕರಿಗೆ ಸಚಿವ ಸ್ಥಾನವನ್ನು ನೀಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬರೋಬ್ಬರಿ ಎಂಟು ಸೂತ್ರಗಳನ್ನು ಅಳವಡಿಕೆ ಮಾಡಿಕೊಂಡು ಮಂತ್ರಿಗಿರಿ ಕೊಡಲಾಗುತ್ತಿದೆ. ಈ ಸೂತ್ರಗಳಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರ ಪಡೆಯಲು ಕೂಡ ಈಗಿನಿಂದಲೇ ತಯಾರಿ ಮಾಡಿಕೊಳ್ಳಲಾಗುತ್ತಿದೆ.
ಹಿರಿಯ ಶಾಸಕರಿಗಿಲ್ಲ ಸಚಿವ ಸ್ಥಾನ?: ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಇದೇ ನನ್ನ ಕೊನೆಯ ಚುನಾವಣೆ ನನ್ನನ್ನು ಗೆಲ್ಲಿಸಿ ಎಂದು ಹೇಳಿಕೊಂಡಿರುವ ಹಿರಿಯ ಶಾಸಕರಿಗೆ ಸಚಿವ ಸ್ಥಾನದಿಂದ ಕೈಬಿಡಲು ನಿರ್ಧರಿಸಲಾಗಿದೆ. ಕಾಂಗ್ರೆಸ್‌ನಿAದ ಸಚಿವ ಸ್ಥಾನವನ್ನು ಪಡೆದುಕೊಂಡು ಅಧಿಕಾರವನ್ನು ಅನುಭವಿಸಿ, ಅಭಿವೃದ್ಧಿಯನ್ನೂ ಮಾಡಿದ ನಂತರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದರೆ ಕಾಂಗ್ರೆಸ್ ಪಕ್ಷಕ್ಕೆ ಭಾರಿ ನಷ್ಟ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯ ಮೇಲೆಯೂ ಕಣ್ಣಿಟ್ಟಿರುವ ಹೈಕಮಾಂಡ್ ನಾಯಕರು ಹಿರಿಯ ಶಾಸಕರನ್ನು ಸಚಿವ ಸ್ಥಾನದಿಂದ ಕೈಬಿಡಲು ತೀರ್ಮಾನಿಸಲಾಗಿದೆ ಎನ್ನಲಾಗಿದ್ದು, ಹಿರಿಯ ಶಾಸಕರಾದ ಆರ್‌ವಿ ದೇಶಪಾಂಡೆ ಹಾಗೂ ಬಿಕೆ ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ಕೈತಪ್ಪು ಸಾಧ್ಯತೆಯಿದೆ. ಬಿ.ಕೆ.ಹರಿಪ್ರಸಾದ್ ಬದಲು ಎಂಎಲ್‌ಸಿ ಬೋಸರಾಜು ಅವರಿಗೆ ಸಚಿವ ಸ್ಥಾನ ಒಲಿದುಬಂದಿದೆ. ಹಿರಿಯರ ಸಂಪುಟ ಸೇರ್ಪಡೆ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಒಮ್ಮತ ಮೂಡಿಬಂದಿಲ್ಲ.
ಆರ್.ವಿ.ದೇಶಪಾAಡೆ ಸೇರಿ ಹಲವು ಹಿರಿಯರ ಸೇರ್ಪಡೆಗೆ ಡಿಕೆ ಶಿವಕುಮಾರ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದ್ದು, ಮಧು ಬಂಗಾರಪ್ಪ, ಬಿ.ಕೆ.ಹರಿಪ್ರಸಾದ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಒಂದೇ ಸಮುದಾಯದ ಮಧು, ಹರಿಪ್ರಸಾದ್ ಸೇರ್ಪಡೆಗೆ ಸಿದ್ದರಾಮಯ್ಯ ಅವರು ಅಸಮ್ಮತಿ ಸೂಚಿಸಿದ್ದಾರೆ. ಸದ್ಯ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ಒಲಿದುಬಂದಿದ್ದು,ಬಿ.ಕೆ ಹರಿಪ್ರಸಾದ್ ಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆ ದಟ್ಟವಾಗಿದ್ದರೂ ಕೊನೆಕ್ಷಣದಲ್ಲಿ ಪಟ್ಟಿ ಪರಿಷ್ಕರಿಸಿದರೂ ಅಚ್ಚರಿಯಿಲ್ಲ