Share this news

ಬೆಂಗಳೂರು : ಕಾಂಗ್ರೆಸ್ ಸರ್ಕಾರದ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ವಿಚಾರವನ್ನು ವಿಪಕ್ಷಗಳು ದೊಡ್ಡ ಅಸ್ತ್ರವನ್ನಾಗಿ ಮಾಡಿಕೊಂಡಿದೆ.

ನಾವು ಕರೆಂಟ್ ಬಿಲ್ ಕಟ್ಟಲ್ಲ ಎಂದು ಜನರು ಹಲವು ಕಡೆ ಮೆಸ್ಕಾಂ ಸಿಬ್ಬಂದಿಗೆ ತರಾಟೆ ತೆಗೆದುಕೊಂಡಿದ್ದರು. ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡ ಬಿಜೆಪಿ, ಜೆಡಿಎಸ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರುತ್ತಿದೆ. ಇದರ ನಡುವೆ ರಾಜ್ಯಾದ್ಯಂತ ‘ಕರೆಂಟ್ ಬಿಲ್ ಕಟ್ಬೇಡಿ’ ಅಭಿಯಾನಕ್ಕೆ ವಿಪಕ್ಷಗಳು ಸಿದ್ದತೆ ನಡೆಸಿದೆ ಎನ್ನಲಾಗಿದೆ. ಉಚಿತ ವಿದ್ಯುತ್ ಯೋಜನೆ ಮಾತ್ರವಲ್ಲದೇ ಕಾಂಗ್ರೆಸ್ ನ ಐದು ಗ್ಯಾರೆಂಟಿ ಯೋಜನೆ ಈಡೇರಿಸುವಂತೆ ವಿಪಕ್ಷಗಳು ಪಟ್ಟು ಹಿಡಿದಿದೆ.

 ಅಂದು ಕಾಂಗ್ರೆಸ್ ನಾಯಕರು ನಂಗೆ ಫ್ರೀ, ನಿಂಗೂ ಫ್ರೀ ಎಂದಿದ್ರು, ಈಗ ಗ್ಯಾರೆಂಟಿ ಯೋಜನೆ ಕೊಡಲಿ ನೋಡೋಣ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ.ಗ್ಯಾರೆಂಟಿ ಕೊಡ್ತೀವಿ ಎಂದು ಘೋಷಣೆ ಮಾಡಿದ್ದು ಯಾರು..? ಇವಾಗ ಕೊಡಿ ನೋಡೋಣ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ನನಗೂ ಫ್ರೀ..ನಿನಗೂ ಫ್ರೀ..ಎಂದು ಸಿದ್ದರಾಮಯ್ಯ ಭಾಷಣದ ವೇಳೆ ಹೇಳಿದ್ದರು.,ಇವಾಗ ಕೊಡಿ..ನೋಡೋಣ ಕಾಂಗ್ರೆಸ್ ಯಾವ ರೀತಿ ಕೊಡುತ್ತೆ ನೋಡೋಣ . ಸುಳ್ಳು ಹೇಳಿ ಕಾಂಗ್ರೆಸ್ ಜನರಿಗೆ ಟೋಪಿ ಹಾಕಲು ಹೊರಟಿದ್ದಾರೆ. ನನಗೂ ಫ್ರೀ..ನಿನಗೂ ಫ್ರೀ..ಎಂದು ಸಿದ್ದರಾಮಯ್ಯ ಹೇಳಿದ್ದರು.,ಇವಾಗ ಕೊಡಿ..ಕಾಂಗ್ರೆಸ್ ಯಾವ ರೀತಿ ಕೊಡುತ್ತೆ ನೋಡೋಣ..ಮೊದಲು ಸರ್ಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿ ಎಂದು ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.ಕಾಂಗ್ರೆಸ್ ಸರ್ಕಾರ 5 ವರ್ಷಗಳ ಕಾಲ ಇರುತ್ತೋ ಇಲ್ವೋ ಗೊತ್ತಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆದ ಜೆಡಿಎಸ್ ಆತ್ಮವಲೋಕನ ಸಭೆಯಲ್ಲಿ ಕುಮಾರಸ್ವಾಮಿ ಮಾತನಾಡಿದರು.ಈ ಸರ್ಕಾರದ ಭವಿಷ್ಯ ಲೋಕಸಭಾ ಚುನಾವಣೆ ಮೇಲೆ ನಿಂತಿದೆ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಜೂನ್ 1 ರೊಳಗೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಬೇಕು, ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದರು. ಗ್ಯಾರಂಟಿ ಕಾರ್ಡ್ ವಿಚಾರದಲ್ಲಿ ಬಿಜೆಪಿ ಎಚ್ಚೆತ್ತುಕೊಳ್ಳಬೇಕಿತ್ತು. ಎಚ್ಚೆತ್ತುಕೊಂಡಿದ್ದರೆ ಬಿಜೆಪಿ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಕಾಂಗ್ರೆಸ್ ಗ್ಯಾರಂಟಿ ಸ್ಕೀಂ ಪರ ಇದ್ದೇನೆ. ಗ್ಯಾರಂಟಿ ಕಾರ್ಡ್ ನಲ್ಲಿ ಯಾವುದೇ ಷರತ್ತುಗಳ ಬಗ್ಗೆ ಉಲ್ಲೇಖಿಸಲ್ಲ. ಜೂನ ್1 ರವರೆಗೆ ಕಾಯುತ್ತೇವೆ. ಷರತ್ತುಗಳು ಇಲ್ಲದೇ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಬೇಕು. ಷರತ್ತು ವಿಧಿಸಿದರೆ ಜೂನ್ 1 ರಿಂದ ಉಗ್ರ ಹೋರಾಟ ನಡೆಸುವುದಾಗಿ ಪ್ರತಾಪ್ ಸಿಂಹ ಎಚ್ಚರಿಸಿದ್ದಾರೆ

 

Leave a Reply

Your email address will not be published. Required fields are marked *