Share this news

ಉಡುಪಿ : ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ 81 ನೇ ಜನ್ಮೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇವಸ್ಥಾನಗಳ ಸ್ವಚ್ಚತೆ, ಲೋಕಕಲ್ಯಾಣಕ್ಕಾಗಿ ಸಾಮೂಹಿಕ ಪ್ರಾರ್ಥನೆ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಗ್ರಂಥಗಳ ಪ್ರದರ್ಶನ, ಸುಸಂಸ್ಕಾರ ನಿರ್ಮಾಣ ಮಾಡಲು ಸಾಧನಾ ಪ್ರವಚನಗಳ ಜೊತೆಗೆ ಸಾಂಸ್ಕೃತಿಕ ಸಂಘಟನೆಗಳ ಸಹಭಾಗಿತ್ವದೊಂದಿಗೆ ಹಿಂದೂ ಏಕತಾ ಮೆರವಣಿಗೆಗಳನ್ನೂ ಹಮ್ಮಿಕೊಳ್ಳಲಾಗಿದೆ.

ಆ ಪ್ರಯುಕ್ತ ಇಂದು ಮದ್ಯಾಹ್ನ 3:30 ಗಂಟೆಗೆ ಉಡುಪಿಯ ಜೋಡುಕಟ್ಟೆಯಿಂದ ಧರ್ಮಧ್ವಜದ ಪೂಜೆಯೊಂದಿಗೆ ಕವಿ ಮುದ್ದಣ ಮಾರ್ಗ, ಕಲ್ಸಂಕ ದಾರಿಯಾಗಿ ಶ್ರೀ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದವರೆಗೆ ಹಿಂದೂ ಏಕತಾ ಮೆರವಣಿಗೆ ನಡೆಯಿತು.


ಮೆರವಣೆಗೆಯಲ್ಲಿ ವಿವಿಧ ಹಿಂದೂ ಸಂಘಟನೆಯ ಪದಾಧಿಕಾರಿಗಳು, ಭಜನಾ ಮಂಡಳಿಯವರು, ಚಂಡೆ ಬಳಗದವರು, ವಿಶೇಷವಾಗಿ ರಣರಾಗಿಣೆ ಶಾಖೆಯ ಯುವತಿಯರು, ಝಾನ್ಸಿರಾಣಿ, ಕಿತ್ತೂರು ರಾಣಿ ಚೆನ್ನಮ್ಮ, ಓನಕೆ ಓಬವ್ವ, ಶಿವಾಜೀ ಮಹಾರಾಜರು, ಬಾಲ ಗಂಗಾಧರ ತಿಲಕ್ ಮುಂತಾದ ವೇಷದಲ್ಲಿ ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮೆರವಣಿಗೆಯಲ್ಲಿ ಸಂಸ್ಥೆಯ ಸಾಧಕರು ಹಿಂದೂ ರಾಷ್ಟ್ರ ಪರ ಘೋಷಣೆಗಳು, ಧರ್ಮಜಾಗೃತಿ, ಹಿಂದೂ ಏಕತೆ , ರಾಷ್ಟ್ರಪ್ರೇಮ ಜಾಗೃತಿ ಮೂಡಿಸುವ ಘೋಷಣೆಗಳನ್ನು ಕೂಗುತ್ತಾ ಸಮಾಜದಲ್ಲಿ ಜಾಗೃತಿ ಮೂಡಿಸಿದರು.

Leave a Reply

Your email address will not be published. Required fields are marked *