Share this news

ಕಾರ್ಕಳ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಂಸ್ಥಾಪಕ ಡಾ| ಟಿ ಎಂ ಎ ಪೈ ಅವರ 125 ನೇ ಜನ ದಿನಾಚರಣೆ ಹಾಗೂ ಕಾರ್ಕಳ ಟಿ.ಎಂ.ಎ ಪೈ ರೋಟರಿ ಆಸ್ಪತ್ರೆಯ ವಾರ್ಷಿಕೋತ್ಸವ ಸಮಾರಂಭವು ಮೇ 26ರಂದು ಶುಕ್ರವಾರ ನಡೆಯಿತು.


ಕಾರ್ಕಳದ ರೋಟರಿ ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಹೆ ಮಣಿಪಾಲದ ಸಹಕುಲಪತಿಗಳಾದ ಡಾ ಶರತ್ ಕೆ ರಾವ್ ಮಾತನಾಡಿ, ಡಾ ಟಿ ಎಂ ಎ ಪೈ ಅವರಿಗೆ ನನ್ನಿಂದ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಉದಾತ್ತ ಮನೋಭಾವ ಶ್ಲಾಘನೀಯ, ಯಾವುದೇ ಒಬ್ಬ ವ್ಯಕ್ತಿ ಜೀವನದಲ್ಲಿ ಮುಂದೆ ಬರಬೇಕಾದರೇ ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಆರ್ಥಿಕ ಸಹಾಯ ಅತೀಮುಖ್ಯ. ಅದರಂತೆ ಮಣಿಪಾಲದಂತಹ ಸಣ್ಣ ಹಳ್ಳಿಯಲ್ಲಿ ಶಿಕ್ಷಣ ಸಂಸ್ಥೆ, ಆಸ್ಪತ್ರೆ ಮತ್ತು ಬ್ಯಾಂಕ್ ಆರಂಭಿಸುವುದರ ಮೂಲಕ ಸಾವಿರಾರು ಜನರಿಗೆ ಉದ್ಯೋಗ ದೊರಕಿಸಿದ ಡಾ.ಟಿ.ಎಂ.ಎ ಪೈ ಎಲ್ಲಾ ವರ್ಗಕ್ಕೂ ಆಶ್ರಯದಾತರಾಗಿದ್ದರು. ಅಂದು ಮಣಿಪಾಲದ ಸಣ್ಣ ಊರಿನಲ್ಲಿ ಆರಂಭಗೊAಡ ಸಂಸ್ಥೆ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಕು ಚೆಲ್ಲುತ್ತಿದೆ ಎಂದರೆ ನಮ್ಮ ದೇಶದ ಹೆಮ್ಮೆ ಎಂದರು.


ಗೌರವ ಅತಿಥಿಗಳಾಗಿದ್ದ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ ಅವಿನಾಶ ಶೆಟ್ಟಿ ಅವರು ಆಸ್ಪತ್ರೆಯ ಉದ್ಯೋಗಿಗಳಿಗೆ ಈ ವರ್ಷ ಆಯೋಜಿಸುತ್ತಿರುವ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕ್ಯಾಲೆಂಡರ್ ಪ್ರತಿಬಿಂಭ ಬಿಡುಗಡೆ ಮಾಡಿ, ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಬೆಳೆದುಬಂದ ರೀತಿ ಮತ್ತು ಇದಕ್ಕೆ ಸಹಕರಿಸಿದ ದಾನಿಗಳನ್ನು ಸ್ಮರಿಸಿದರು. ಕೆ ಎಂ ಸಿ ಡೀನ್ ಡಾ ಪದ್ಮರಾಜ್ ಹೆಗ್ಡೆ ಆಸ್ಪತ್ರೆಯ ವೆಬ್ ಸೈಟ್ ಬಿಡುಗಡೆಗೊಳಿಸಿ ಮಾತನಾಡಿ ಇನ್ನಷ್ಟು ಹೊಸ ಹೊಸ ಸೇವೆಗಳನ್ನು ಇಲ್ಲಿ ಆರಂಭಿಸಲಿದ್ದೇವೆ ಎಂದರು.

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗ, ಮೂಳೆ ಮತ್ತು ಕೀಲಿನ ವಿಭಾಗ, ಕಿವಿ ಮೂಗು ಗಂಟಲು ವಿಭಾಗ, ವಿಕಿರಣ ಶಾಸ್ತ್ರ ವಿಭಾಗ ಮತ್ತು ಪ್ಯಾಥೊಲಜಿ (ರೋಗ ಪತ್ತೆ ಶಾಸ್ತ್ರ) ವಿಭಾಗಗಳನ್ನು ಈ ವರ್ಷ ಹೊಸದಾಗಿ ಸೇರಿಸಲಾಗಿದೆ ಎಂದರುಮ

ಈ ಸಂದರ್ಭದಲ್ಲಿ ಮಾಹೆ ಮಣಿಪಾಲ, ಕೆ ಎಂ ಸಿ ಮಣಿಪಾಲ , ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಹಿರಿಯ ಅಧಿಕಾರಿಗಳು, ರೋಟರಿ ಕಾರ್ಕಳದ ದಾನಿಗಳು ಹಾಗೂ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸ್ತಿçÃರೋಗ ಹಾಗೂ ಪ್ರಸೂತಿ ತಜ್ಞ ಡಾ ಸಂಜಯ್ ಕುಮಾರ್ ವಂದಿಸಿದರು. ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳದ ಸಿಬ್ಬಂದಿಗಳಿAದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು

Leave a Reply

Your email address will not be published. Required fields are marked *