Share this news

ಬೆಂಗಳೂರು: ಸೇವೆಯಿಂದ ವಜಾಗೊಂಡಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರ ಮರು ನೇಕಮಗೊಂಡ ನಂತ್ರ, ಗಳಿಕ ರಜೆಯ ನಗದೀಕರಣಕ್ಕೂ ಅರ್ಹರಾಗುತ್ತಾರೆ ಎಂಬುದಾಗಿ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ಕೆ ಎಸ್ ಆರ್ ಟಿ ಸಿ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರನ್ನೊಳಗೊಂಡ ನ್ಯಾಯಪೀಠವು, ಮರು ನೇಮಕಗೊಂಡ ನೌಕರ ಗಳಿಕೆ ರಜೆಯ ನಗದೀಕರಣಕ್ಕೂ ಅರ್ಹ ಎಂಬುದಾಗಿ ಆದೇಶಿಸಿದೆ.

ಸಿಬ್ಬಂದಿ ವಜಾಗೊಂಡಿದ್ದ ಅವಧಿಗೆ ಗಳಿಕೆ ರಜೆ ನಗದು ಪಡೆಯುವಂತಿಲ್ಲ ಎಂಬ ಸಾರಿಗೆ ಸಂಸ್ಥೆಯ ವಾದವನ್ನು ಒಪ್ಪದ ಹೈಕೋರ್ಟ್, ಒಮ್ಮೆ ಉದ್ಯೋಗಿ ಅಥವಾ ನೌಕರ ಗಳಿಕ ರಜೆ ಪಡೆಲು ಅರ್ಹನಾದರೆ ಆತ ಅದರ ನಗದೀಕರಣಕ್ಕೂ ಸಹಜವಾಗಿಯೇ ಅರ್ಹನಾಗಿರುತ್ತಾನೆ. ಅದರಂತೆ ಸಿಬ್ಬಂದಿಗೆ ಗಳಿಕೆ ರಜೆ ನಗದು ಪಾವತಿಸಬೇಕು ಎಂಬುದಾಗಿ ಆದೇಶಿಸಿದೆ.

ಅಂದಹಾಗೇ 1977ರಲ್ಲಿ ಕೆ ಎಸ್ ಆರ್ ಟಿಸಿ ನಿರ್ವಾಹಕರಾಗಿ ಕೆಲಸಕ್ಕೆ ಸೇರಿದ್ದಂತ ವಿ.ನಾಗರಾಜ್ ಕಾರ್ಯಲೋಪದ ಹಿನ್ನಲೆಯಲ್ಲಿ 1991ರಲ್ಲಿ ಸೇವೆಯಿಂದ ವಜಾಗೊಂಡಿದ್ದರು. ಅವರು ಕಾರ್ಮಿಕ ನ್ಯಾಯಲಯದ ಮೊರೆ ಹೋಗಿದ್ದರು. ನ್ಯಾಯಾಲಯ 1993ರಿಂದ ಪೂರ್ವಾನ್ವಯವಾಗುವಂತೆ ಎಲ್ಲ ಭತ್ಯೆ ಮತ್ತು ಬಾಕಿ ವೇತನ ನೀಡಬೇಕೆಂದು ಮತ್ತು ಮರು ನೇಮಕ ಮಾಡಿಕೊಳ್ಳುವಂತೆ ಕೆ ಎಸ್ ಆರ್ ಟಿಸಿಗೆ ಸೂಚಿಸಿತ್ತು.

ಕಾರ್ಮಿಕ ನ್ಯಾಯಾಲಯದ ಆದೇಶದ ಅನುಸಾರ ನಾಗರಾಜ್ ಅವರನ್ನು ಕೆ ಎಸ್ ಆರ್ ಟಿ ಸಿ ಮರುನೇಮಕಗೊಂಡಿತ್ತು. 2012ರ ಜುಲೈನಲ್ಲಿ ನಾಗರಾಜ್ ನಿವೃತ್ತರಾಗಿದ್ದರು. ಕೆ ಎಸ್ ಆರ್ ಟಿಸಿ ಹೊಸ ಸುತ್ತೋಲೆಯಲ್ಲಿ 300 ರಜೆಗಳ ಬದಲಿಗೆ  246 ಗಳಿಕೆ ರಜೆಗಳಿಗೆ ಮಾತ್ರ ನಗದು ನೀಡಲಾಗುತ್ತದೆ ಎಂದು ತಿಳಿಸಿತ್ತು.

ನಾಗರಾಜ್ ಈ ಆದೇಶದ ವಿರುದ್ಧ ಮತ್ತೆ ಕಾರ್ಮಿಕ ನ್ಯಾಯಾಲಯದ ಮೊರೆ ಹೋಗಿದ್ದರು. 1991ರ ಜನವರಿ 14ರಿಂದ 1993ರ ಜನವರಿ 7ರವರೆಗಿನ 82 ದಿನಗಳ ಜಾ ಗಳಿಕೆಯ ನಗದು ಸಂಬಂಧ 1.09 ಲಕ್ಷವನ್ನು ಶೇ.12ರಷ್ಟು ಬಡ್ಡಿದರಲ್ಲಿ ಪಾವತಿಸುವಂತೆ ಕೆ ಎಸ್ ಆರ್ ಟಿಸಿಗೆ ನ್ಯಾಯಾಲಯ ಆದೇಶಿಸಿತ್ತು.

 ಕೆ ಎಸ್ ಆರ್ ಟಿಸಿ ಕಾರ್ಮಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಅಲ್ಲದೇ ನಿಗದಿತ ಅವಧಿಯಲ್ಲಿ ಕಾರ್ಯನಿರ್ವಹಿಸದ ನಾಗರಾಜ್ ಅವರು ಗಳಿಕೆ ನಗದು ರಜೆ ಪ್ರಯೋಜನ ಪಡೆಯಲು ಅರ್ಹರಲ್ಲ ಎಂದಿತ್ತು. ಈ ವಾದ ಒಪ್ಪದಂತ ಹೈಕೋರ್ಟ್ ನಾಯಾಯಪೀಠವು ಒಮ್ಮೆ ಉದ್ಯೋಗಿ ಅಥವಾ ನೌಕರ ಗಳಿಕೆ ರಜೆ ಪಡೆಯಲು ಅರ್ಹನಾದರೆ ಆತ ಅದರ ನಗದೀಕರಣಕ್ಕೂ ಸಹಜವಾಗಿಯೇ ಅರ್ಹನಾಗಿರುತ್ತಾನೆ. ಅದರಂತೆ ಸಿಬ್ಬಂದಿಗೆ ಗಳಿಕೆ ರಜೆ ನಗದು ಪಾವತಿಸಬೇಕು ಎಂಬುದಾಗಿ ಆದೇಶಿಸಿದೆ.

Leave a Reply

Your email address will not be published. Required fields are marked *