ಕಾರ್ಕಳ: ಆವರಣವಿಲ್ಲದ 30 ಅಡಿ ಆಳದ ಬಾವಿಗೆ ಬಿದ್ದಿದ್ದ ದನವೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.
ಹೆಬ್ರಿ ತಾಲೂಕಿನ ಅಂಡಾರು ಗ್ರಾಮದ ಕೊಂದಳಿಕೆ ಎಂಬಲ್ಲಿನ ರೋಹನ್ ಎಂಬವರ ಜಾಗದಲ್ಲಿ ಸೋಮವಾರ ಬೆಳಗ್ಗೆ ಮೇಯಲು ಬಂದಿದ್ದ ದನವೊಂದು ಆವರಣವಿಲ್ಲದ ಬಾವಿಗೆ ಬಿದ್ದಿದೆ. ಈ ವಿಚಾರ ತಿಳಿದ ರೋಹನ್ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ ಹಿನ್ನಲೆಯಲ್ಲಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ದನವನ್ನು ಸುರಕ್ಷಿತವಾಗಿ ಮೇಲಕ್ಕಿತ್ತಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಬಿ.ಎನ್ ಸಂಜೀವ, ಸಿಬ್ಬಂದಿಗಳಾದ ರೂಪೇಶ್, ಚಂದ್ರಶೇಖರ್, ರವಿಚಂದ್ರ, ಮೊಹಮ್ಮದ್ ರಫೀಕ್, ಸಂಜಯ್ ಪಾಲ್ಗೊಂಡಿದ್ದರು.