ಕಾರ್ಕಳ: ದೆಹಲಿಯ ನೂತನ ಸಂಸತ್ ಭವನದಲ್ಲಿ ಅಧಿಕಾರದ ಹೆಗ್ಗುರುತಾದ(ಸೆಂಗೋಲ್) ರಾಜದಂಡ ಪ್ರತಿಷ್ಠಾಪನೆಯಂತೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ತಿಂಗಳೆ ಎಂಬ ಪುಟ್ಟ ಊರಿನಲ್ಲಿಯೂ ಸೆಂಗೋಲ್(ರಾಜದAಡ) ಹಸ್ತಾಂತರದ ಸಂಪ್ರದಾಯ ಹಿಂದಿನಿAದಲೂ ಬೆಳೆದುಬಂದಿದೆ. ತಿಂಗಳೆ ಗರಡಿ ನೇಮೋತ್ಸವದಲ್ಲಿ ಇಂತಹ ಪರಂಪರೆ ನಡೆಯುತ್ತಾ ಬಂದಿದೆ ಎನ್ನುವುದೇ ವಿಶೇಷ.
ಬ್ರಿಟೀಷರಿಂದ ಸ್ವಾತಂತ್ರö್ಯ ಸಿಕ್ಕಿದ ಸಂದರ್ಭದಲ್ಲಿ ದೇಶದ ಪ್ರಥಮ ಪ್ರಧಾನ ಮಂತ್ರಿ ಜವಾಹರ್ ಲಾಲ್ ನೆಹರೂ ಅವರಿಗೆ ಅಧಿಕಾರ ಹಸ್ತಾಂತರದ ಕುರುಹಾಗಿ ರಾಜದಂಡವನ್ನು(ಸೆAಗೋಲ್) ಹಸ್ತಾಂತರಿಸಲಾಯಿತು. ಅಂದಿನಿAದ ಇಂದಿನವರೆಗೂ ವಸ್ತು ಸಂಗ್ರಹಾಲಯದಲ್ಲಿದ್ದ ಸೆಂಗೋಲ್(ರಾಜದAಡ) ಅನ್ನು ಪ್ರಧಾನಿ ನರೇಂದ್ರ ಮೋದಿ ದೆಹಲಿಯ ನೂತನ ಸಂಸತ್ ಭವನದ ಸ್ಪೀಕರ್ ಪೀಠದ ಬಳಿ ಪ್ರತಿಷ್ಠಾಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ದೆಹಲಿಯ ಲೋಕಸಭೆ ಪೀಠದ ಬಳಿ ರಾರಾಜಿಸುತ್ತಿರುವ ಈ ಸೆಂಗೋಲ್ ನ ವಿಶಿಷ್ಟ ಪರಂಪರೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ತಿಂಗಳೆ ಎಂಬ ಪುಟ್ಟ ಹಳ್ಳಿಯಲ್ಲೂ ಇದೆ ಎಂದರೆ ನಿಜಕ್ಕೂ ನಂಬಲೇಬೇಕು. ಹೆಬ್ರಿ-ಆಗುಂಬೆ ರಾಷ್ಟಿçÃಯ ಹೆದ್ದಾರಿಯ ಸೀತಾನದಿಯ ಕೂಡ್ಲು ಜಲಪಾತಕ್ಕೆ ಹೋಗುವ ದಾರಿಯಲ್ಲಿನ ಪುಟ್ಟ ಊರು ತಿಂಗಳೆಯಲ್ಲಿ ದೈವಗಳ ಗರಡಿ ನೇಮೋತ್ಸವದ ಸಂದರ್ಭದಲ್ಲಿ ರಾಜದಂಡ ಹಸ್ತಾಂತರ ಪ್ರಕ್ರಿಯೆ ನಡೆಯುತ್ತದೆ. ಹಿರಿಯರಿಂದ ಬಂದ ರಾಜದಂಡವನ್ನು ಅಧಿಕಾರದ ಹಸ್ತಾಂತರದ ಪರಂಪರೆಯ ಕುರುಹಾಗಿ ಹಸ್ತಾಂತರಿಸಲಾಗುತ್ತದೆ ಎಂದು ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ತಿಳಿಸಿದ್ದಾರೆ.
ಈ ಕುರಿತು ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ವಿಕ್ರಮಾರ್ಜುನ ಹೆಗ್ಡೆ ಮಾಹಿತಿ ನೀಡಿ,ರಾಜ ಪಟ್ಟಾಭಿಷೇಕದ ನೆಲೆಯಲ್ಲಿ ಕತ್ತಿ, ಪೇಟ, ಮುದ್ರೆಯುಂಗುರ, ರಾಜದಂಡವನ್ನು ಪುರೋಹಿತರು ರಾಜನಿಗೆ ನೀಡುವುದು ಪರಂಪರೆಯಲ್ಲಿ ಬಂದಿರುವ ವಾಡಿಕೆಯಾಗಿದೆ. ಜ್ಞಾನ, ಕರ್ತವ್ಯದ ನೆಲೆಯಲ್ಲಿ ನಂದಿ(ವಾಹನ), ಭೃಂಗಿ(ದ್ವಾರಪಾಲಕ) ಸಂಕೇತವು ರಾಜದಂಡದಲ್ಲಿ ಕೆತ್ತಲಾಗಿದೆ ಎಂದರು.
ರಾಜನು ನ್ಯಾಯಪರ, ಕರ್ತವ್ಯ ಪರನಾಗಿದ್ದುಕೊಂಡು ಜನರಿಗೆ ರಕ್ಷಣೆ ನೀಡಬೇಕು. ರಾಜದಂಡ ಸಂಪ್ರದಾಯವು ಕಾಶ್ಮೀರದಿಂದ ಕೇರಳದ ತನಕವಿದ್ದು, ಏಕರೂಪದ ಸಂಪ್ರದಾಯ ಇಂದು ಉಳಿಸಬೇಕಿದೆ. ಅಧಿಕಾರ ಸ್ವೀಕಾರ ಕೇವಲ ಪ್ರಮಾಣ ವಚನಕ್ಕೆ ಮಾತ್ರ ಸೀಮಿತವಾಗಿದೆ, ಆದರೆ ಅಧಿಕಾರ ಹಸ್ತಾಂತರದ ಸಂದರ್ಭದಲ್ಲಿ ರಾಜದಂಡ ಹಸ್ತಾಂತರದ ಸಂಪ್ರದಾಯ ಮುಂದುವರಿಯಬೇಕು ಮಾತ್ರವಲ್ಲದೇ ರಾಜನೀತಿ ಪಾಲನೆಯಾಗಬೇಕಿದೆ ಎಂದರು. ವಿಜಯ ದಶಮಿ, ದೈವ ಬಲಿ ಸಂದರ್ಭ ರಾಜದಂಡ ಬಳಕೆಯಾಗುತ್ತಿದ್ದು ನಿತ್ಯ ಆರತಿ ಮಾಡಲಾಗುತ್ತದೆ. ಹಿಂದೆ ಹಿರಿಯರು ರಾಜದಂಡದ ಸಮಕ್ಷಮ ನ್ಯಾಯ ಪಂಚಾಯಿತಿ ತೀರ್ಪು ನೀಡುತ್ತಿದ್ದರು. ರಾಜನ ಉಪಸ್ಥಿತಿ ಇಲ್ಲದಿದ್ದರೆ ಪಟ್ಟದಲ್ಲಿ ರಾಜದಂಡಕ್ಕೆ ಪೂಜೆ ಸಲ್ಲಿಸಲಾಗುತ್ತಿತ್ತು ಎಂದು ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ವಿವರಿಸಿದ್ದಾರೆ