ಕಾರ್ಕಳ : ಕ್ರೀಡಾ ಮನೋಭಾವ, ಕ್ರೀಡಾ ಸ್ಪೂರ್ತಿ ಬದುಕಿನ ಎಲ್ಲಾ ರಂಗಗಳಲ್ಲೂ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತನ್ನ ಆರೋಗ್ಯ ಮತ್ತು ಕ್ಷಮತೆಯನ್ನು ಉಳಿಸಿಕೊಳ್ಳಬೇಕಾದರೆ ಕೇವಲ ಅಂಕಗಳ ಹಿಂದೆ ಹೋದರೆ ಸಾಲದು. ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಬದುಕಿನಲ್ಲಿ ಯಶಸ್ಸು ಗಳಿಸುವುದು ಅಂಕಗಳಿಕೆಯಿAದಲ್ಲ ಬದಲು ಉತ್ತಮ ಆರೋಗ್ಯ, ವ್ಯವಹಾರ ಜ್ಞಾನ, ಸಮಯದ ಸದ್ಭಳಕೆಯಿಂದ ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ಕ್ರೀಡೆಯಿಂದ ಆರೋಗ್ಯ, ಕ್ಷಮತೆ ಪ್ರಾಪ್ತವಾಗುತ್ತದೆ. ಕಾಲೇಜಿನ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡು ಕಾಲೇಜಿಗೆ ಕೀರ್ತಿಯನ್ನು ತರುವುದರ ಜತೆಗೆ ಬದುಕಲ್ಲಿ ಯಶಸ್ವಿಯಾಗಬೇಕು ಎಂದು ಭುವನೇಂದ್ರ ಕಾಲೇಜಿನ ಹಳೆವಿದ್ಯಾರ್ಥಿ, ಕಾರ್ಕಳದ ಖ್ಯಾತ ನ್ಯಾಯವಾದಿ ಹಾಗೂ ಕರ್ನಾಟಕದ ಗೇರು ನಿಗಮದ ಮಾಜಿ ಅಧ್ಯಕ್ಷ ಮಣಿರಾಜ್ ಶೆಟ್ಟಿ ಹೇಳಿದರು.
ಅವರು ಭುವನೇಂದ್ರ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಡಾ.ಮಂಜುನಾಥ್ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆಯನ್ನು ಅಳವಡಿಸಿಕೊಂಡು ಮುಂದುವರಿದರೆ ಶಿಕ್ಷಣ ಸಂಸ್ಥೆಗೆ ಹೆಮ್ಮೆಯೆನಿಸುತ್ತದೆ. ನಮ್ಮಲ್ಲೂ ರಾಷ್ಟಿçÃಯ ಮಟ್ಟದಲ್ಲಿ ಕ್ರೀಡೆಯ ಬೇರೆ ಬೇರೆ ವಿಭಾಗಗಳಲ್ಲಿ ಮಿಂಚುತ್ತಿರುವ ವಿದ್ಯಾರ್ಥಿಗಳಿರುವುದು ನಮಗೆ ಹೆಮ್ಮೆಯ ವಿಚಾರ ಎಂದರು.
ವಿದ್ಯಾರ್ಥಿಗಳಿAದ ಆಕರ್ಷಕ ಪಥಸಂಚಲನ ಮತ್ತು ಗೌರವ ವಂದನೆ ಕಾರ್ಯಕ್ರಮಗಳು ನಡೆದವು.
ಕಾಲೇಜಿನ ಕ್ರೀಡಾ ದೈಹಿಕ ನಿರ್ದೇಶಕ ನವೀನಚಂದ್ರ ಸ್ವಾಗತಿಸಿದರು. ರಾಷ್ಟಿçÃಯ ಕ್ರೀಡಾಪಟು ಶ್ವೇತಾ ಶೆಣೈ, ತೃತೀಯ ಬಿ.ಕಾಂ. ಕ್ರೀಡಾಳುಗಳಿಗೆ ಪ್ರತಿಜ್ಞಾವಿಧಿ ನೆರವೇರಿಸಿದರು. ಗಣೇಶ್ ದ್ವಿತೀಯ ಬಿ.ಎಸ್ಸಿ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.