ಬೆಂಗಳೂರು: 2022-23ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಒಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರು, ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢ ಶಾಲಾ ಮುಖ್ಯಶಿಕ್ಷಕರು, ತತ್ಸಮಾನ ವೃಂದದ ಶಿಕ್ಷಕರು, ಅಧಿಕಾರಿಗಳ ಸಾಮಾನ್ಯ ವರ್ಗಾವಣೆಗೆ ಪರಿಷ್ಕೃತ ವರ್ಗಾವಣಾ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಹೊರಡಿಸಿದೆ. ಅದರಂತೆ ಜೂನ್.6ರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಈ ಸಂಬಂಧ ಇಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಬಿ.ಬಿ ಕಾವೇರಿ ಅವರು ಪರಿಷ್ಕೃತ ವರ್ಗಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಹೆಚ್ಚುವರಿ ಶಿಕ್ಷಕರ ಪರಿಷ್ಕೃತ ಕರಡು ಪಟ್ಟಿಯನ್ನು ದಿನಾಂಕ 06-06-2023ರಂದು ಪ್ರಕಟಿಸಲಾಗುತ್ತದೆ. ವರ್ಗಾವಣಾ ತಂತ್ರಾಂಶದ ಮುಖಾಂತರ ಹೆಚ್ಚುವರಿ ಪಟ್ಟಿಯಲ್ಲಿರುವ ಶಿಕ್ಷಕರು ಆನ್ ಲೈನ್ ನಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ 06-06-2023 ರಿದಂ 10-06-2023ರವರೆಗೆ ಅವಕಾಶ ನೀಡಲಾಗುತ್ತದೆ. ಸಮರ್ಪಕ ಮರುಹಂಚಿಕೆ ಕ್ರಮಗಳು ಅನ್ವಯಿಸುವುದಿಲ್ಲ ಎಂದಿದೆ.
ಹೆಚ್ಚುವರಿ ಶಿಕ್ಷಕರು ಸಲ್ಲಿಸಿರುವ ಆಕ್ಷೇಪಣೆಯಲ್ಲಿನ ದಾಖಲೆಗಳ ಪರಿಶೀಲನೆ, ಅಂಗೀಕಾರ, ತಿರಸ್ಕಾರವನ್ನು 06-06-2023ರಿಂದ 13-06-2023ರವರೆಗೆ ನಡೆಸಲಾಗುತ್ತದೆ. ಅಂತಿಮ ತಾತ್ಕಾಲಿಕ ಆದ್ಯಾತಾ ಪಟ್ಟಿಯನ್ನು 14-06-2023ರಂದು ಪ್ರಕಟಿಸಲಾಗುತ್ತದೆ. ಆದೇಶದಿಂದ ಭಾದಿತರಾದ ಶಿಕ್ಷಕರು ಕುಂದುಕೊರತೆ ನಿವಾರಣಾ ಅಧಿಕಾರಿಗಳನ್ನು ಸಂಪರ್ಕಿಸಲು ದಿನಾಂಕ 15-06-2023ರಂದು ಅವಧಿ ನಿಗದಿ ಪಡಿಸಲಾಗಿದೆ. ಅಂತಿಮ ಆದ್ಯಾತಾ ಪಟ್ಟಿಗೆ ಸಲ್ಲಿಕೆಯಾಗುವ ಆಕ್ಷೇಪಣೆಗಳ ಪರಿಶೀಲನೆ ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಿಸುವ ಪುರಸ್ಕೃತ, ತಿರಸ್ಕೃತ ಪಟ್ಟಿಯಿಂದ ಭಾದಿತರಾಗುವ ಶಿಕ್ಷರು ಸಲ್ಲಿಸುವ ಮನವಿಯ ಇತ್ಯರ್ಥ ಹಾಗೂ ಇಂಧೀಕರಣವನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಆಯಾ ಕಚೇರಿ ಮುಖ್ಯಸ್ಥರು ದಿನಾಂಕ 16-06-2023ರಂದು ಆಲಿಕೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರು ಹಂಚಿಕೆ ಕೌನ್ಸಿಲಿಂಗ್ ಗೆ ಅರ್ಹರಿರುವ ಶಿಕ್ಷಕರ ಅಂತಿಮ ಆಧ್ಯತಾ ಪಟ್ಟಿಯನ್ನು ಎಲ್ಲಾ ವೃಂದವಾರು, ಶಾಲಾವಾರು, ವಿಷಯವಾರು, ತಾಲೂಕುವಾರು, ಜಿಲ್ಲಾವಾರು ದಿನಾಂಕ 17-06-2023ರಂದು ಪ್ರಕಟಿಸಲಾಗುತ್ತದೆ. ಕೌನ್ಸಿಲಿಂಗ್ ಗೆ ಲಭ್ಯವಿರುವ ವೃಂದವಾರು, ವಿಷಯವಾರು ಖಾಲಿ ಹುದ್ದೆಗಳನ್ನು ದಿನಾಂಕ 17-06-2023ರಂದು ಪ್ರಕಟಣೆ ನೀಡಲಾಗುತ್ತದೆ .ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹೊಂದಾಣಿಕೆ ಕೌನ್ಸಿಲಿಂಗ್ ಬ್ಲಾಕ್ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ಉಪ ನಿರ್ದೇಶಕರವರೆದ ದಿನಾಂಕ 20-06-2023ರಂದು ಪೂರ್ವಾಹ್ನ ಕೌನ್ಸಿಲಿಂಗ್ ನಡೆಸಲಾಗುತ್ತದೆ. ಬ್ಲಾಕ್ ಹಂತದ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರು ಹೊಂದಾಣಿಕೆಯ ನಂತರ ತಾಲೂಕಿನಲ್ಲಿ ಖಾಲಿ ಹುದ್ದೆ ಲಭ್ಯವಿಲ್ಲದೆ ಉಳಿಕೆಯಾಗುವ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ ಜಿಲ್ಲಾ ಹಂತದಲ್ಲಿ 21-06-2023ರಂದು ಪೂರ್ವಾಹ್ನ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.