ಬೆಂಗಳೂರು::ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ ಜಿಲ್ಲಾ ಚುನಾವಣಾಧಿಕಾರಿ, ಅಪರ ಜಿಲ್ಲಾ ಚುನಾವಣಾಧಿಕಾರಿ, ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿ ಮತ್ತು ಸಹಾಯ ಚುನಾವಣಾಧಿಕಾರಿ, ಚುನಾವಣಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿಗಳಿಗೆ ಗೌರವಧನವನ್ನು ಮಂಜೂರು ಮಾಡಲಾಗಿದೆ.
ಈ ಕುರಿತು ಸಹಾಯಕ ಮುಖ್ಯ ಚುನಾವಣಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿಯವರು ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ದಿನಾಂಕ 01-01-2023ರಿಂದ 15-05-2023ರವರೆಗೆ ಪೂರ್ಣಾವಧಿಯವರೆಗೆ ಸಮರ್ಪಕವಾಗಿ ಚುನಾವಣಾ ಕಾರ್ಯನಿರ್ವಹಿಸಿರುವ ಅಧಿಕಾರಿ, ಸಿಬ್ಬಂದಿಗಳಿಗೆ ಅವರ ಒಂದು ತಿಂಗಳ ವೇತನ ಅಂದರೆ ಮೇ. 2023ರ ವೇತನದ ಪೂರ್ಣಮೊತ್ತವನ್ನು ಹಾಗೂ ಕಡಿಮೆ ಅವಧಿಗೆ ಹಾಜರಾಗಿದ್ದ ಅಧಿಕಾರಿ, ಸಿಬ್ಬಂದಿಗಳಿಗೆ ಹಾಜರಾದ ದಿನಗಳಿಗನುಗುಣವಾಗಿ ಅವರ ಹಾಜರಾತಿ ಪ್ರಮಾಣಾನುಸಾರ ವೇತನ ಗೌರವವನ್ನಾಗಿ ನಿಗದಿಪಡಿಸಿ, ಮಂಜೂರು ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ
ಸರ್ಕಾರದ ಆದೇಶಗಳಲ್ಲಿ ನಿಗದಿಪಡಿಸಿರುವ ಗೌರವಧನದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಹಾಗೂ ಯಾವುದೇ ಹೆಚ್ಚುವರಿ ಭತ್ಯೆಗಳನ್ನು ಮಂಜೂರು ಮಾಡಲು ಅವಕಾಶವಿರುವುದಿಲ್ಲ. ಸದರಿ ವೇತನವನ್ನು ಪ್ರಧಾನ ಲೆಕ್ಕ ಶೀರ್ಷಿಕೆಯಲ್ಲಿ ಭರಿಸತಕ್ಕದ್ದು ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಹೇಳಿದ್ದಾರೆ.