ಬೆಂಗಳೂರು: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೇ ಐದು ಗ್ಯಾರಂಟಿ ಯೋಜನೆಗಳ ಜಾರಿ ಯಾವಾಗ ಎಂಬ ಚರ್ಚೆ ರಾಜ್ಯಾದ್ಯಂತ ಶುರುವಾಗಿತ್ತು. ಸದ್ಯ ಈಗ ರಾಜ್ಯ ಸರ್ಕಾರ ಯೋಜನೆ ಘೋಷಿಸಿದೆ.
ಈ ಯೋಜನೆಯ ಫಲಾನುಭವಿಗಳ ಬಗ್ಗೆ ಇದ್ದ ಅನುಮಾನಗಳನೆಲ್ಲ ಬಗೆಹರಿಸಿದೆ. ಮತ್ತೊಂದೆಡೆ ಗೃಹ ಜ್ಯೋತಿ ಯೋಜನೆ ಬಾಡಿಗೆ ಮನೆಯಲ್ಲಿರುವವರಿಗೆ ಯಾವ ರೀತಿ ಅನುಕೂಲ ಆಗುತ್ತೆ ಎಂಬ ಬಗ್ಗೆ ಅನೇಕ ಗೊಂದಲಗಳಿದ್ದವು. ಸದ್ಯ ಈಗ ಡಿಸಿಎಂ ಡಿಕೆ ಶಿವಕುಮಾರ್ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ.
ಸರ್ಕಾರದ ಗ್ಯಾರಂಟಿಗಳ ಬಗ್ಗೆ ಗೊಂದಲ ಬೇಡ. ಬಾಡಿಗೆ ಮನೆಯಲ್ಲಿ ಇರುವವನು ಬಡವನಲ್ವಾ? ಓನರ್ ಹೆಸರಿನಲ್ಲಿ ಮೀಟರ್ ಇರಬಹುದು. ಬಾಡಿಗೆ ಮನೆ ಇರಲಿ ಸ್ವಂತ ಮನೆ ಇರಲಿ. ನಾವು ಏನು ಹೇಳಿದ್ದೇವೋ ನಮ್ಮ ಮಾತು ಖಚಿತ. ಉಚಿತ ಅಂತ ಹೇಳಿದ್ದೇವೆ ಉಚಿತಾನೇ. 150 ಯೂನಿಟ್ ಬಳಸುತ್ತಿದ್ದವರು 200 ಯೂನಿಟ್ ಬಳಸ್ತಾರೆ. ಕರೆಂಟ್ ಏಕಾಏಕಿ ಬಳಸೋದು ಹೆಚ್ಚಳ ಆಗಬಾರದು 10% ಹೆಚ್ಚಳ ಕೊಟ್ಟಿದ್ದೇವೆ. ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ನೀಡಿರುವುದು ಬೆಲೆ ಏರಿಕೆ ತಗ್ಗಿಸಲು. ಯಾರಿಗೂ ಆದಾಯ ಜಾಸ್ತಿ ಆಗಿಲ್ಲ ಬೆಲೆ ಏರಿಕೆ ಆಗಿದೆ. ಯಾರಿಗೂ ತೊಂದರೆ ಆಗಬಾರದು ಎಂದರು.