Share this news

ಕಾರ್ಕಳ : ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು ಇವರ ಸಹಯೋಗದೊಂದಿಗೆ ಕಾರ್ಕಳ ಚೇತನಾ ವಿಶೇಷ ಶಾಲೆಯಲ್ಲಿ ಜೂ.08 ಗುರುವಾರ ಬೆಳಿಗ್ಗೆ 10 ಗಂಟೆಯಿAದ ಉಚಿತ ವಾಕ್ – ಶ್ರವಣದೋಷ ಮತ್ತು ಫಿಸಿಯೋಥೆರಪಿ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ನಡೆಯಲಿದೆ.


ಶ್ರವಣದೋಷ, ಕಿವಿ ಮತ್ತು ಮಾತಿಗೆ ಸಂಬAಧಿಸಿದ ಸಮಸ್ಯೆ ಮತ್ತು ದೋಷಗಳು, ಮಾತಿನ ತೊಂದರೆ ಇರುವ ಮಕ್ಕಳ ಪೋಷಕರು ಅಥವಾ ಆಪ್ತ ಸಂಬAಧಿಗಳು, ಗಂಟು ಸವೆತ/ನೋವು, ಭುಜ, ಸೊಂಟ ನೋವು, ಪಾರ್ಕಿನ್ಸನ್ಸ್/ ನಡುಕ, ಮುಖದ ಪಾರ್ಶ್ವವಾಯು ಇನ್ನಿತರ ಸಮಸ್ಯೆ ಹೊಂದಿರುವ ಎಲ್ಲಾ ವಯೋಮಾನದವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಚಾಲಕರಾದ ರಘುನಾಥ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *