ಬೆಂಗಳೂರು:ಫ್ಯಾಬಿಯನ್ ಚಂಡಮಾರುತದ ಪರಿಣಾಮವಾಗಿ ಕೇರಳಕ್ಕೆ ಮುಂಗಾರು ಇನ್ನೂ 2ರಿಂದ 3 ದಿನ ತಡವಾಗಿ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು (ಜೂನ್ 4 ರಂದು) ಕೇರಳಕ್ಕೆ ಮುಂಗಾರು ಮಾರುತ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದರೂ ಇದೀಗ ಚಂಡಮಾರುತದಿAದ ಆದರೆ ಕೆಲ ದಿನಗಳ ಕಾಲ ಮುಂಗಾರು ಪ್ರವೇಶ ವಿಳಂಬವಾಗಲಿದ್ದು ಈ ಹಿನ್ನಲೆಯಲ್ಲಿ ಕರ್ನಾಟಕ್ಕೆ ಜೂನ್ 10ರ ಬಳಿಕವೇ ಮುಂಗಾರು ಆಗಮಿಸುವ ನಿರೀಕ್ಷೆಯಿದೆ.
ಕೇರಳಕ್ಕೆ ಮುಂಗಾರು ಪ್ರವೇಶ ತಡವಾಗಲಿರುವ ಜತೆಗೆ ಮುಂದಿನ 5 ದಿನಗಳವರೆಗೆ ಪೂರ್ವ ಭಾರತದಲ್ಲಿ ಬಿಸಿಗಾಳಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಿಂದೂ ಮಹಾಸಾಗರದಲ್ಲಿ ಉಂಟಾದ ಫ್ಯಾಬಿಯನ್ ಚಂಡಮಾರುತ ಮಾನ್ಸೂನ್ ಮಾರುತಗಳನ್ನು ಸೆಳೆದಿದೆ. ಹೀಗಾಗಿ ಮುಂಗಾರು ಕೇರಳ ಪ್ರವೇಶ ಎರಡು ಮೂರು ದಿನ ವಿಳಂಬವಾಗಬಹುದು ಎಂದು ರಾಷ್ಟ್ರೀಯ ಹವಾಮಾನ ವಿಜ್ಞಾನ ವಿಶ್ವವಿದ್ಯಾಲಯದ ಅಕ್ಷಯ್ ದೋರಸ್ ಹೇಳಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಜೂನ್ 6 ರಿಂದ 8 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿತ್ರದುರ್ಗ., ಬಳ್ಳಾರಿ. ದಾವಣಗೆರೆ.ಮೈಸೂರು, ಮಂಡ್ಯ. ಕೋಲಾರ. ರಾಮನಗರ., ಚಿಕ್ಕಬಳ್ಳಾಪುರ, ಹಾಸನ, ಬೆಂಗಳೂರು. ಬೆಂಗಳೂರು ಗ್ರಾಮಾಂತರ. ಮೈಸೂರು. ಚಾಮರಾಜನಗರ. ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಹಗಲಿನಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಹಾಗೂ ದಕ್ಷಿಣ ಒಳನಾಡು, ಉತ್ತರ ಒಳನಾಡು ಹಾಗೂ ಕರಾವಳಿ ಕರ್ನಾಟಕದ ಭಾಗಗಳಲ್ಲಿ ಸಾಧಾರಂ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.ಕರ್ನಾಟಕದಲ್ಲಿ ಮುಂಗಾರು ಮಳೆ ಪ್ರಾರಂಭ ಇನ್ನೂ ಕೆಲವು ದಿನಗಳ ಮಟ್ಟಿಗೆ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.