ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ್ದ ಭರವಸೆಯಂತೆ ಎಲ್ಲ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣವನ್ನು ಘೋಷಣೆ ಮಾಡಿದೆ.
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಾಗಿತ್ತು. ಇನ್ನೇನು ಜೂನ್ 11ರಿಂದ ಈ ಯೋಜನೆ ಜಾರಿಯಾಗಲಿದೆ. ಇನ್ನು ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣಕ್ಕೆ ಬೇಡಿಕೆ ಹೆಚ್ಚಿದ್ದು ಪುರುಷರು ಕೂಡ ತಮಗೂ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕೊಡಬೇಕು ಎನ್ನುತ್ತಿದ್ದಾರ. ಜೊತೆಗೆ ಸಾರಿಗೆ ನಿಗಮಗಳ ನಿವೃತ್ತಿ ನೌಕರರ ಉಚಿತ ಪ್ರಯಾಣಕ್ಕೆ ಆಗ್ರಹ ಕೇಳಿ ಬಂದಿದೆ.
ನಿವೃತ್ತಿ ಆದ ನೌಕರರಿಗೆ ಅವರ ಪತಿ/ಪತ್ನಿಗೆ ಉಚಿತ ಪ್ರಯಾಣ ಸೌಲಭ್ಯಕ್ಕೆ ಒತ್ತಾಯ ಕೇಳಿ ಬಂದಿದೆ. ನಿವೃತ್ತಿ ಬಳಿಕ ವಾರ್ಷಿಕವಾಗಿ 500 ರೂ ನಿಗಮಗಳು ವಸೂಲಿ ಮಾಡುತ್ತಿವೆ. 35-40 ವರ್ಷ ಸಂಸ್ಥೆ ಏಳಿಗೆಗಾಗಿ ದುಡಿದ ನೌಕರರಿಂದ 500 ವಸೂಲಿ ಮಾಡಲಾಗುತ್ತಿದೆ. ಜೂನ್ 11 ರಂದು ಫ್ರೀ ಬಸ್ ಸ್ಕೀಂ ಚಾಲನೆ ವೇಳೆ ನಾಲ್ಕು ನಿಗಮಗಳ ನಿವೃತ್ತಿ ನೌಕರರ ಪತಿ/,ಪತ್ನಿಗೆ ಉಚಿತ ಪ್ರಯಾಣ ಘೋಷಣೆ ಮಾಡಬೇಕು ಎಂದು ಒತ್ತಾಯಿಸಲಾಗುತ್ತಿದೆ. ಈ ಬಗ್ಗೆ ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.