ಕಾರ್ಕಳ : ಕಾಂಬೋಡಿಯ ದೇಶದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ನಮ್ಮ ದೇಶದ ಪ್ರತಿನಿಧಿಯಾಗಿ ಸ್ಪರ್ಧಿಸಿದ ಶ್ರೀ ಸಿದ್ದಿವಿನಾಯಕ ಬಾಲ ಭಜನಾ ಮಂಡಳಿ ಕಾರ್ಕಳ ಇದರ ಸದಸ್ಯೆಯಾದ ಕುಮಾರಿ ಕವನ ಆಚಾರ್ಯ ಗೆ ಇಂದು ಕಾರ್ಕಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಗೌರವಿಸಲಾಯಿತು
ಹಿರಿಯರಾದ ಕಮಲಾಕ್ಷ ನಾಯಕ್ ಜಾರ್ಕಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಕಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷ ಶ್ರೀನಿವಾಸ್ ಪೂಜಾರಿ ಎರ್ಲಪಾಡಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಶೈಲೇಶ್ ಸಾಣೂರು, ಮಾಜಿ ಅಧ್ಯಕ್ಷೆ ಸವಿತಾ ಶೆಣೈ, ಸಂಗೀತ ಗುರುಗಳಾದ ಸಂಜೀವ, ಸಿದ್ದಿವಿನಾಯಕ ಬಾಲ ಭಜನಾ ಮಂಡಳಿಯ ಮುಖ್ಯಸ್ಥರಾದ ಶೈಲಜಾ ಹಾಗೂ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.