ಕಾರ್ಕಳ: ಅಜೆಕಾರಿನ ಚರ್ಚ್ ರೋಡ್ ಬಳಿಯ ಶಾಲೋಮ್ ಪ್ರಗತಿ ವಾಣಿಜ್ಯ ಸಂಕೀರ್ಣದಲ್ಲಿ ನೂತನ ಅಜೆಕಾರು ಮೆಡಿಕಲ್ಸ್ ಜೂನ್ 5ರಂದು ಶುಭಾರಂಭಗೊಂಡಿತು.
ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನುಷಾ ಶೆಟ್ಟಿ ನೂತನ ಮೆಡಿಕಲ್ಸ್ ಉದ್ಘಾಟಿಸಿ ಶುಭಕೋರಿದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ಮೌರಿಸ್ ತಾವ್ರೋ,ನ್ಯಾಯವಾದಿ ಹರೀಶ್ ಅಧಿಕಾರಿ, ಶೇಖ್ ಉಮ್ಮರ್ ಸಾಹೇಬ್,ಭಾಸ್ಕರ ಶೆಟ್ಟಿ ಕುಂಠಿನಿ,ಸುಂದರ ಶೆಟ್ಟಿ ಮುನಿಯಾಲು, ನಂದ ಕುಮಾರ್ ಹೆಗ್ಡೆ, ಪ್ರಶಾಂತ ಶೆಟ್ಟಿ, ಹರೀಶ್ ನಾಯಕ್,ಸಂಸ್ಥೆಯ ಪಾಲುದಾರರು ಹಾಗೂ ಕಟ್ಟಡದ ಮಾಲಕರಾದ ಸುಜಯ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಅಜೆಕಾರು ಸುತ್ತಮುತ್ತಲಿನ ಪ್ರದೇಶಗಳ ಗ್ರಾಹಕರಿಗೆ ಬೇಕಾದ ಎಲ್ಲಾ ರೀತಿಯ ಔಷಧಿಗಳು ರಿಯಾಯಿತಿ ದರದಲ್ಲಿ ಅಜೆಕಾರು ಮೆಡಿಕಲ್ಸ್ ನಲ್ಲಿ ಲಭ್ಯವಿರಲಿದೆ.



