ಕಾರ್ಕಳ: ವಿಧಾಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತ,ಗೃಹಲಕ್ಷಿö್ಮÃ ಸೇರಿದಂತೆ 5 ಗ್ಯಾರಂಟಿಗಳನ್ನು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿಗಳಿಗೆ ಮನಸೋತು ಮತದಾರ ಸ್ಪಷ್ಟ ಬಹುಮತ ನೀಡಿದ್ದಾನೆ. ಇತ್ತ ನುಡಿದಂತೆ ನಡೆದ ಸಿದ್ದರಾಮಯ್ಯ ಸರ್ಕಾರ 5 ಗ್ಯಾರಂಟಿಗಳು ಸಾಕಷ್ಟು ನಿಯಮಾವಳಿಗಳನ್ನು ರೂಪಿಸಿ ಯೋಜನೆ ಜಾರಿಗೊಳಿಸಿದೆ. ಈ ಪೈಕಿ ಉಚಿತ ವಿದ್ಯುತ್ ಯೋಜನೆ ಜಾರಿಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಆದರೆ ಜನರಿಗೆ ಉಚಿತ ವಿದ್ಯುತ್ ನೀಡುವ ಯೋಜನೆಯ ಹಿಂದೆ ಸರ್ಕಾರ ಸದ್ದಿಲ್ಲದೇ ವಿದ್ಯುತ್ ಶುಲ್ಕ ಏರಿಕೆಯ ಜತೆಗೆ ಇಂಧನ ಹೊಂದಾಣಿಕೆ ಶುಲ್ಕವನ್ನು(F A C) ಭಾರೀ ಏರಿಕೆ ಮಾಡಿ ಉಚಿತ ವಿದ್ಯುತ್ ಜತೆಗೆ ದರ ಏರಿಕೆ ಬರೆ ಹಾಕಲು ಮುಂದಾಗಿದೆ
ಕಳೆದ ಏಪ್ರಿಲ್ನಲ್ಲಿ ಗ್ರಾಹಕರೊಬ್ಬರಿಗೆ ಮೆಸ್ಕಾಂ ನೀಡಿದ ಬಿಲ್ಲಿನಲ್ಲಿ ಇಧನ ಹೊಂದಾಣಿಕೆ ಶುಲ್ಕದಲ್ಲಿ (F A C) ಭಾರೀ ಏರಿಕೆಯಾಗಿರುವುದು ಮೀಟರ್ ರೀಡರ್ ನೀಡಿರುವ ಬಿಲ್ಲಿನಿಂದ ಬಯಲಾಗಿದೆ. ಕಾರ್ಕಳದ ಗ್ರಾಹರೊಬ್ಬರು ತಮ್ಮ ಮನೆಗೆ ಒಂದು ಕಿ.ವ್ಯಾ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ. ಈ ಹಿಂದೆ ಏಪ್ರಿಲ್ ನಲ್ಲಿ ಇಂಧನ ಹೊಂದಾಣಿಕೆ ಶುಲ್ಕ ಕೇವಲ 9.80 ರೂ ಇತ್ತು, ಈ ದರ ಮೇ ತಿಂಗಳಿನಲ್ಲಿ ಏಕಾಎಕಿ 55 ರೂ ಗೆ ಏರಿಕೆಯಾಗಿದೆ, ಇದಾದ ಬಳಿಕ ಜೂನ್ ತಿಂಗಳಿನಲ್ಲಿ 115.50 ರೂ ನಷ್ಟು ಭಾರೀ ಏರಿಕೆಯಾಗಿದೆ.ಕಳೆದ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಮೇ ತಿಂಗಳಿನಲ್ಲಿ ಶೇ 6 ಪಟ್ಟು ಶುಲ್ಕ ಹೆಚ್ಚಳ ಮಾಡಿದರೆ, ಜೂನ್ ತಿಂಗಳಿನಲ್ಲಿ ಮತ್ತೆ ದುಪ್ಪಟ್ಟು ಶುಲ್ಕ ಹೆಚ್ಚಳ ಮಾಡಿದೆ. ಇದರ ಜತೆಗೆ ಜುಲೈನಿಂದ ಡಿಸೆಂಬರ್ ವರೆಗೆ ಸರಾಸರಿ ಪ್ರತೀ ಯೂನಿಟ್ಗೆ 1.50 ರೂ ದರ ಏರಿಕೆ ಮಾಡಿ ಸರ್ಕಾರ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಇದರಿಂದ ಉಚಿತ ವಿದ್ಯುತ್ ಯೋಜನೆ ದುಬಾರಿಯಾಗಲಿದೆಯೇ ಎನ್ನುವ ಅನುಮಾನ ಮೂಡಿದೆ.