ಕಾರ್ಕಳ : ಕಾರ್ಕಳದ ಮಂಜರಪಲ್ಕೆ ಕೆದಿಂಜೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟ ಪ್ರಕರಣಕ್ಕೆ ಸಂಬAಧಿಸಿದAತೆ ಅಪಘಾತವೆಸಗಿ ಪರಾರಿಯಾದ ಲಾರಿ ಚಾಲಕನನ್ನು ಲಾರಿ ಸಹಿತ ಕಾರ್ಕಳ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಪಾದಚಾರಿಗೆ ಡಿಕ್ಕಿ ಹೊಡೆದು ಲಾರಿ ಸಹಿತ ಪರಾರಿಯಾಗಿದ್ದ ಕುಂದಾಪುರದ ಬಿ.ಸಿ ರೋಡ್ ನಿವಾಸಿ ಲಾರಿ ಮಾಲಕ/ಚಾಲಕ ಸುರೇಶ್ ಶೆಟ್ಟಿ ಎಂಬಾತನನ್ನು ಪೊಲೀಸರು ಲಾರಿ ಸಹಿತ ವಶಕ್ಕೆ ಪಡೆದಿದ್ದಾರೆ. ಅಪಘಾತ ಸಂಭವಿಸಿದ ಕೂಡಲೇ ತನ್ನ ಮೇಲೆ ಅನುಮಾನ ಬರದಂತೆ ಮಾಡಲು ಲಾರಿಯನ್ನು ಅಡ್ಡದಾರಿಯಲ್ಲಿ ನಿಲ್ಲಿಸಿ ಸ್ವಲ್ಪ ಹೊತ್ತಿನ ಬಳಿಕ ಆ ಜಾಗದಿಂದ ತೆರಳಿದ್ದ ಸುರೇಶ್ ಶೆಟ್ಟಿ ಬಳಿಕ ಕುಂದಾಪುರದ ಗ್ಯಾರೇಜ್ ಒಂದರಲ್ಲಿ ಲಾರಿಯನ್ನು ಸರ್ವಿಸ್ಗೆ ಇಟ್ಟಿದ್ದ.
ಘಟನೆಯ ಹಿನ್ನಲೆ:
ಕಳೆದ ಮೇ 25ರಂದು ರಾತ್ರಿ ಒಡಿಶಾ ಮೂಲದ ಲಕ್ಷ್ಮಣ್ ಮುರ್ಮು, ಘನಶ್ಯಾಮ್ ಮುರ್ಮು ಮತ್ತು ಕರಣ್ ಮುರ್ಮು ಎಂಬವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಂಜರಪಲ್ಕೆಯ ಕೆದಿಂಜೆ ಎಂಬಲ್ಲಿ ಕಾರ್ಕಳ ಕಡೆಗೆ ಹೋಗುತ್ತಿದ್ದ ಲಾರಿ ಘನಶ್ಯಾಮ್ ಮತ್ತು ಕರಣ್ಗೆ ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ಘನಶ್ಯಾಮ್ ಮತ್ತು ಕರಣ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸಮಾಜ ಸೇವಕ ಸುಪ್ರೀತ್ ಶೆಟ್ಟಿ ಕೆದಿಂಜೆÀವರು ಗಾಯಾಳುಗಳಿಗೆ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಘನಶ್ಯಾಮ್ ಅವರನನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆಗೆ ಅವರು ದಾರಿ ಮಧ್ಯೆ ಮೃತಪಟ್ಟಿದ್ದರು. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು.
ತನಿಖೆ ಆರಂಭಿಸಿದ ಪೊಲೀಸರು ಇದೀಗ ಅಪಘಾತವೆಸಗಿ ಪರಾರಿಯಾದ ಲಾರಿ ಚಾಲಕನನ್ನು ಲಾರಿ ಸಹಿತ ಬಂಧಿಸುವಲ್ಲಿ ಯಶ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಕಾರ್ಕಳ ವೃತ್ತ ನಿರೀಕ್ಷಕ ನಾಗರಾಜ್ ಟಿ.ಡಿ. ನಾಗರಾಜ್, ಪೊಲೀಸ್ ಸಿಬ್ಬಂದಿ ಪ್ರಶಾಂತ್ ಹಾಗೂ ಗಿರೀಶ್ ಭಾಗಿಯಾಗಿದ್ದರು.