ಬೆಂಗಳೂರು : ಶಾಸಕ ಜನಾರ್ದನರೆಡ್ಡಿಗೆ ಸಿಬಿಐ ವಿಶೇಷ ಕೋರ್ಟ್ ಬಿಗ್ ಶಾಕ್ ನೀಡಿದ್ದು, ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಲಕ್ಷ್ಮೀ ಅರುಣಾ ಅವರ ಆಸ್ತಿ ಜಪ್ತಿಗೆ ಆದೇಶ ನೀಡಿದೆ.ಸಿಬಿಐ ವಿಶೇಷ ಕೋರ್ಟ್ ಶಾಸಕ ಜನಾರ್ದನ ರೆಡ್ಡಿ ಹಾಗೂ ಪತ್ನಿ ಅರುಣಾ ಅವರ ಆಸ್ತಿ ಜಪ್ತಿಗೆ ಆದೇಶ ಹೊರಡಿಸಿದ್ದು, ಕ್ರಿಮಿನಲ್ ಕೇಸ್ ಮುಗಿಯುವವರೆಗೂ ಆಸ್ತಿ ಜಪ್ತಿ ಮಾಡುವಂತೆ ಸೂಚನೆ ನೀಡಲಾಗಿದೆ.

ಜನಾರ್ದನ ರೆಡ್ಡಿ ಹಾಗೂ ಪತ್ನಿ ಲಕ್ಷ್ಮೀ ಅರುಣಾ ಅವರಿಗೆ ಸೇರಿದ ಒಟ್ಟು 124 ಕೋಟಿ ರೂ. ಆಸ್ತಿ ಜಪ್ತಿಗೆ ಕೋರ್ಟ್ ಸೂಚನೆ ನೀಡಿದ್ದು, ಕ್ರಯಪತ್ರಗಳ ಮೂಲಕ ಖರೀದಿಸಿದ್ದ 77 ಆಸ್ತಿಯೂ ಜಪ್ತಿ ಮಾಡಲು ಕೋರ್ಟ್ ಆದೇಶಿಸಿದೆ.

