ಮಂಗಳೂರು: ರಾಜ್ಯದ ಎಲ್ಲಾ ಮಹಿಳೆಯರಿಗೆ ಸರ್ಕಾರ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಗೊಳಿಸಿದ ಪರಿಣಾಮ ಸಾಕಷ್ಟು ಮಹಿಳೆಯರಿಗೆ ಈ ಯೋಜನೆಯ ಲಾಭ ದಕ್ಕಿದೆ. ಉಚಿತ ಬಸ್ ಪ್ರಯಾಣದ ಲಾಭ ಪಡೆದ ವಿವಾಹಿತ ಮಹಿಳೆಯೊಬ್ಬಳು ಪತಿ ಹಾಗೂ ಮಗುವನ್ನು ತೊರೆದು ಹುಬ್ಬಳ್ಳಿಯಿಂದ ಉಚಿತ ಬಸ್ ಹತ್ತಿ ಪ್ರಿಯಕರನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ.

ಹುಬ್ಬಳ್ಳಿಯ ವಿವಾಹಿತ ಮಹಿಳೆ ಸರ್ಕಾರದ ಫ್ರೀ ಬಸ್ಸಿನಲ್ಲಿ ಹುಬ್ಬಳಿಯಿಂದ ದೂರದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಬಂದ ಮಹಿಳೆ 11 ತಿಂಗಳ ಮಗುವನ್ನು ಬಿಟ್ಟು ಪ್ರಿಯಕರನೊಂದಿಗೆ ನಾಪತ್ತೆಯಾಗಿದ್ದಾಳೆ.ಈಕೆಗೆ ಮದುವೆಯ ಮುಂಚೆಯೇ ಯುವಕನೊಬ್ಬನೊಂದಿಗೆ ಪ್ರೇಮವಿತ್ತು. ಆದರೆ ಯುವತಿಗೆ ಬೇರೆಯವನ ಜೊತೆ ಮದುವೆ ಮಾಡಿಸಲಾಗಿತ್ತು ಎನ್ನಲಾಗಿದೆ. ಮಹಿಳೆ ಮದುವೆ ಆದ ಬಳಿಕವೂ ತನ್ನ ಪ್ರಿಯಕರನ ಜೊತೆ ಒಡನಾಟದಲ್ಲಿದ್ದಳು. ಪುತ್ತೂರು ಕೋಡಿಂಬಾಡಿ ಸಮೀಪದ ಪ್ರಿಯಕರ ತೋಟದ ಕೆಲಸ ಮಾಡುತ್ತಿದ್ದ.
ಮಹಿಳೆ ತನ್ನ ಗಂಡನಲ್ಲಿ ಆಧಾರ್ ಲಿಂಕ್ ಮಾಡಿ ಬರುತ್ತೇನೆಂದು ಹೇಳಿ ಈಕೆ ಮನೆಯಿಂದ ಎಸ್ಕೇಪ್ ಆಗಿದ್ದಾಳೆ. ಆಧಾರ್ ಕಾರ್ಡ್ ಅನ್ನು ಫ್ರೀ ಬಸ್ಸಿನಲ್ಲಿ ಪ್ರಯಾಣಿಸುವಾಗ ಕಂಡಕ್ಟರ್ ಗೆ ತೋರಿಸಲು ತಂದಿದ್ದಳು.ಇದೀಗ ಎರಡೂ ಮನೆಯವರು ಮಹಿಳೆ ಹಾಗೂ ಆಕೆಯ ಪ್ರಿಯಕರನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇವರಿಬ್ಬರನ್ನ ಹುಡುಕಿಕೊಂಡು ಬಂದ ಕುಟುಂಬಸ್ಥರಿಗೆ ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಸಾಥ್ ನೀಡಿದ್ದಾರೆ.

ಪುತ್ತೂರಿಗೆ ಬಂದು ಪ್ರಿಯಕರನ ಜೊತೆ ಪರಾರಿಯಾದ ಮಹಿಳೆ ಬಗ್ಗೆ ಜಯಪ್ರಕಾಶ್ ಮಾಹಿತಿ ಸಂಗ್ರಹಿಸಿದ್ದು, ಟವರ್ ಲೊಕೇಶನ್ ಮೂಲಕ ಪತ್ತೆ ಹಚ್ಚಿದಾಗ ಪುತ್ತೂರಿನಿಂದ ಸಿದ್ಧಕಟ್ಟೆಗೆ ಪರಾರಿಯಾದ ಮಾಹಿತಿ ಲಭ್ಯವಾಗಿದೆ. ಇದೀಗ ಇಬ್ಬರೂ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.

