ಕಾರ್ಕಳ: ಕನಕಶ್ರೀ ಪ್ರಕಾಶನ ಬ್ಯಾಕೋಡ, ಇವರ ಪ್ರಾಯೋಜಕತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ದಾವಣಗೆರೆ ಇವರ ಸಹಕಾರದೊಂದಿಗೆ ಇದೆ ಜೂ.26 ರಂದು ದಾವಣಗೆರೆಯ ರಂಗಮಹಲ್ ನಲ್ಲಿ ನಡೆಯಲಿರುವ ಅಖಿಲ ಕರ್ನಾಟಕ ದ್ವಿತೀಯ ಮಹಿಳಾ ಯುವ ಸಮ್ಮೇಳನದ ಅಧ್ಯಕ್ಷರಾಗಿ ಮೂಲತಃ ಕಾರ್ಕಳ ತಾಲೂಕಿನ ಎಣ್ಣೆ ಹೊಳೆಯವರಾದ ಶ್ರೀಮತಿ ರೇಷ್ಮಾ ಶೆಟ್ಟಿ ಗೊರೂರು ಇವರು ಆಯ್ಕೆಯಾಗಿದ್ದಾರೆ.

ರೇಷ್ಮಾ ಶೆಟ್ಟಿ ಗೊರೂರು ಅವರು ಯುವ ಸಾಹಿತಿಯಾಗಿದ್ದು ಈಗಾಗಲೇ ಇವರ ಎರಡು ಕೃತಿಗಳು ಲೋಕಾರ್ಪಣೆಗೊಂಡಿದ್ದು ಮತ್ತೆರಡು ಕೃತಿಗಳು ಸಿದ್ಧಗೊಳ್ಳುತ್ತಿವೆ.
ಜನಮಿಡಿತ ಪತ್ರಿಕೆಯ ಹಾಸನ ಜಿಲ್ಲಾ ಪ್ರತಿನಿಧಿಯಾಗಿರುವ ಇವರು ಈಗಾಗಲೇ ತಮ್ಮ ಬರಹಗಳು, ಕಾರ್ಯಕ್ರಮ ನಿರೂಪಣೆ, ಪತ್ರಿಕಾ ಮಾಧ್ಯಮದ ಮೂಲಕ ಗುರುತಿಸಿಕೊಂಡಿದ್ದು ಅನೇಕ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯ ಕಾರ್ಯದರ್ಶಿ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗೊರೂರು ಘಟಕದ ಸಂಚಾಲಕರಾಗಿ ಹತ್ತು ಹಲವಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಇವರನ್ನು ಮಹಿಳಾ ಯುವ ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆಗೊಳಿಸಲಾಗಿದೆ ಎಂದು ಕನಕಶ್ರೀ ಪ್ರಕಾಶನ ಬ್ಯಾಕೋಡದ ಮುಖ್ಯಸ್ಥರಾದ ಸಿದ್ದರಾಮ ನೀಲಜಗಿ ತಿಳಿಸಿದ್ದಾರೆ.

