Share this news

ಮೂಡಬಿದಿರೆ: ಯುವ ವಾಹಿನಿ ಮೂಡುಬಿದಿರೆ ಘಟಕ,IIFL ಫೈನಾನ್ಸ್ ಮೂಡುಬಿದಿರೆ ಹಾಗೂ ಆಳ್ವಾಸ್ ಹೆಲ್ತ್ ಸೆಂಟರ್ ಮೂಡಬಿದಿರೆ ಇವರ ಸಹಯೋಗದೊಂದಿಗೆ ಸಮಾಜ ಮಂದಿರ ಸಭಾ ಮೂಡುಬಿದಿರೆ ಇದರ ಆಶಯದಲ್ಲಿ ರಕ್ತದಾನ ಶಿಬಿರವು ಜೂನ್ 25 ಭಾನುವಾರದಂದು ರಂದು ಬೆಳಗ್ಗೆ 9 ಗಂಟೆಯಿಂದ ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆಯಲಿದೆ.


ಮಾಜಿ ಸಚಿವ ಕೆ ಅಭಯಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಆಳ್ವಾಸ್ ಹೆಲ್ತ್ ಸೆಂಟರ್ ನ ಆಡಳಿತ ನಿರ್ದೇಶಕ ಡಾ.ವಿನಯ್ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ .ಯುವ ವಾಹಿನಿ ಮೂಡಬಿದಿರೆ ಘಟಕದ ಅಧ್ಯಕ್ಷ ಸುಶಾಂತ್ ಕರ್ಕೇರ ಹಾಗೂ ಐಐಎಫ್ಎಲ್ ಫೈನಾನ್ಸ್ ನ ಪ್ರಾದೇಶಿಕ ವ್ಯವಸ್ಥಾಪಕ ತೋಮಸ್ ವಿ.ಟಿ ಉಪಸ್ಥಿತರಿರುವರು ಎಂದು ಯುವ ವಾಹಿನಿ ಮೂಡುಬಿದಿರೆ ಘಟಕ , ಐಐಎಫ್ಎಲ್ ಫೈನಾನ್ಸ್ ಮೂಡುಬಿದಿರೆ ಹಾಗೂ ಸಮಾಜ ಮಂದಿರ ಸಭಾ ಮೂಡುಬಿದಿರೆ ಇವರ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *