ಬೆಂಗಳೂರು : ವಿದ್ಯುತ್ ದರ ಏರಿಕೆ ಮಾಡಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ಸೋಲಾರ್ ಸಬ್ಸಿಡಿಗೂ ಕೊಕ್ ಕೊಟ್ಟಿದೆ ಎಂದು ಟ್ವೀಟರ್ ನಲ್ಲಿ ರಾಜ್ಯ ಬಿಜೆಪಿ ಘಟಕ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ವಿದ್ಯುತ್ ದರ ಏರಿಕೆ ಮಾಡಿದ್ದ ಇದೀಗ ಸಬ್ಸಿಡಿಗೂ ಕೊಕ್ ಕೊಟ್ಟಿದೆ. ಸೋಲಾರ್ಗೆ ಉತ್ತೇಜನ ನೀಡಲು ಕೊಡುತ್ತಿದ್ದ ಸಬ್ಸಿಡಿಯನ್ನೇ ಕಿತ್ತುಕೊಂಡು ಖಜಾನೆ ತುಂಬಿಸಿಕೊಳ್ಳಲು ಮುಂದಾಗಿದೆ. ಸಿದ್ದರಾಮಯ್ಯರವರೇ, ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಟಾರ್ಗೆಟ್ ಮಾಡಿರುವ ಪಟ್ಟಿಯನ್ನು ಒಂದೇ ಸಲ ಬಿಡುಗಡೆ ಮಾಡಿಬಿಡಿ. ಮೇಲಿಂದ ಮೇಲೆ ಬರೆ ಹಾಕಿ ಜನರನ್ನು ನರಳಾಡಿಸಬೇಡಿ ಎಂದು ಕಿಡಿಕಾರಿದೆ.

