ಮೂಲ್ಕಿ: ರಕ್ತದಾನ ಅತ್ಯಂತ ಶ್ರೇಷ್ಠದಾನ. ಒಬ್ಬರ ಜೀವ ಉಳಿಸುವಲ್ಲಿ ರಕ್ತದಾನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಪಕ್ಷಿಕೆರೆ ವಿನಾಯಕ ಮಿತ್ರ ಮಂಡಳಿಯ ಆಶ್ರಯದಲ್ಲಿ ಕೆಮ್ರಾಲ್ ಗ್ರಾಮ ಪಂಚಾಯತ್ , ವೆನ್‌ಲಾಕ್ ಆಸ್ಪತ್ರೆ , ಆತ್ತೂರು ಗೈಯ್ಸ್ , ನಾಗಬ್ರಹ್ಮ ಭಜನಾ ಮಂಡಳಿ ಸೈಂಟ್ ಜೂಡ್ ಅಸೋಸಿಯೇಶನ್, ಕಂಬಳಬೆಟ್ಟು ಫ್ರೆಂಡ್ಸ್ , ಗುರುಬ್ರಹ್ಮ ಫ್ರೆಂಡ್ಸ್ ಪುನರೂರು, ಪಕ್ಷಿಕೆರೆ ರಿಕ್ಷಾ ಚಾಲಕ ಮಾಲಕರ ಸಂಘ ಮತ್ತು ದುರ್ಗಾ ಶಕ್ತಿ ಕೆಮ್ರಾಲ್ ಘಟಕದ ಸಹಯೋಗದಲ್ಲಿ ಪಕ್ಷಿಕೆರೆಯ ಸಂತ ಜೂದರ ಚರ್ಚ್ನ ಸಮುದಾಯ ಭವನದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಅಧ್ಯಕ್ಷತೆ ವಹಿಸಿದ್ದರು.
ದರೆಗುಡ್ಡೆ ಗ್ರಾಮ ಪಂಚಾಯತ್ ಪಿಡಿಒ ರಮೇಶ್ ರಾಥೋಡ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿನೋದ್ ಬೊಳ್ಳೂರು, ಸಾರ್ವಜನಿಕ ಗಣೆಶೋತ್ಸವ ಸಮಿತಿಯ ಅಧ್ಯಕ್ಷ ಗಣಪತಿ ಆಚಾರ್ಯ, ವೆನ್ ಲಾಕ್ ಆಸ್ಪತ್ರೆಯ ವೈದ್ಯೆ ಡಾ| ಸೆಲ್ವಿ, ರಕ್ತ ನಿದಿಯ ಅಶೋಕ್, ರಿಕ್ಷಾ ಚಾಲಕ ಮಾಲಕರ ಸಂಘದ ಗೋವಿಂದ, ಗ್ರಾಮ ಪಂಚಾಯತ್ ಸದಸ್ಯ ಹರಿಪ್ರಸಾದ್, ದುರ್ಗಾ ಶಕ್ತಿಯ ಸರಸ್ವತೀ, ರಾಜೇಶ್ ದಾಸ್, ಜೀತೇಶ್ ಮತ್ತಿತರರಿದ್ದರು. ಸುಮಾರು 100 ಮಿಕ್ಕಿ ಜನರು ರಕ್ತದಾನದಲ್ಲಿ ಭಾಗವಹಿಹಿಸಿದ್ದರು.