Share this news

ಹೆಬ್ರಿ :ಹೆಬ್ರಿ ತಾಲೂಕಿನ 9 ಗ್ರಾಮ ಪಂಚಾಯಿತಿಗಳ ಮುಂದಿನ ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನು ಉಡುಪಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿಗದಿಗೊಳಿಸಲಾಗಿದೆ.


ಈ ಕುರಿತು ಸೋಮವಾರಜೂ. 19 ರಂದು ಹೆಬ್ರಿಯ ಅನಂತ ಪದ್ಮನಾಭ ದೇವಸ್ಥಾನದ ಸಭಾಭವನದಲ್ಲಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಅವರ ಅಧ್ಯಕ್ಷತೆಯಲ್ಲಿ ಮೀಸಲಾತಿ ನಿಗದಿ ಪ್ರಕ್ರಿಯೆ ಜರಗಿತು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ, ಎಸಿ ರಶ್ಮಿ, ಮಂಜುನಾಥ್ ಹಾಗೂ ಹೆಬ್ರಿ ತಹಶಿಲ್ದಾರ್ ತಹಶೀಲ್ದಾರ್ ಪುರಂದರ ಕೆ. ಉಪಸ್ಥಿತರಿದ್ದರು.

ಈ ಕೆಳಕಂಡ ಗ್ರಾಮ ಪಂಚಾಯಿತಿ ಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ
ಮೀಸಲಾತಿ ಪಟ್ಟಿ ಈ ಕೆಳಗನಂತಿದೆ:

ಕುಚ್ಚೂರು : ಅಧ್ಯಕ್ಷ – ಎಸ್‌ಟಿ ಮಹಿಳೆ, ಉಪಾಧ್ಯಕ್ಷ – – ಸಾಮಾನ್ಯ

ನಾಡ್ಪಾಲು : ಅಧ್ಯಕ್ಷ – ಎಸ್‌ಸಿ ಮಹಿಳೆ, ಉಪಾಧ್ಯಕ್ಷ –

ಹಿಂದುಳಿದ ವರ್ಗ (ಎ)

ಹೆಬ್ರಿ : ಅಧ್ಯಕ್ಷ – ಸಾಮಾನ್ಯ ಉಪಾಧ್ಯಕ್ಷ – ಹಿಂದುಳಿದ ವರ್ಗ(ಎ) ಮಹಿಳೆ

ಚಾರ : ಅಧ್ಯಕ್ಷ – ಸಾಮಾನ್ಯ ಉಪಾಧ್ಯಕ್ಷ – ಸಾಮಾನ್ಯ

ಶಿವಪುರ : ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ

ಮುದ್ರಾಡಿ : ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಎಸ್‌ಸಿ ಮಹಿಳೆ

ವರಂಗ : ಅಧ್ಯಕ್ಷ – ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ – ಸಾಮಾನ್ಯ ಮಹಿಳೆ

ಬೆಳ್ವೆ : ಅಧ್ಯಕ್ಷ -ಹಿಂದುಳಿದ ವರ್ಗ ಮಹಿಳೆ, ಉಪಾಧ್ಯಕ್ಷ – ಎಸ್‌ಟಿ ಮಹಿಳೆ

ಮಡಾಮಕ್ಕಿ : ಅಧ್ಯಕ್ಷ : ಸಾಮಾನ್ಯ ಉಪಾಧ್ಯಕ್ಷ – ಸಾಮಾನ್ಯ ಮಹಿಳೆ

Leave a Reply

Your email address will not be published. Required fields are marked *