Share this news

ಉತ್ತರ ಅಟ್ಲಾಂಟಿಕಾ: 1912 ರಲ್ಲಿ ಮುಳುಗಡೆಯಾಗಿ 1500ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಟೈಟಾನಿಕ್ ಹಡಗಿನ ಅವಶೇಷಗಳಿರುವ ಸಮುದ್ರದಾಳಕ್ಕೆ ಪ್ರವಾಸ ಹೋದ ಜಲಂತರ್ಗಾಮಿ ಪ್ರವಾಸಿ ನೌಕೆಯೊಂದು ನಾಪತ್ತೆಯಾಗಿದ್ದು, ಅದರ ಪತ್ತೆಗೆ ತೀವ್ರ ಹಡುಕಾಟ ನಡೆಯುತ್ತಿದೆ.

ಮಧ್ಯ ಅಟ್ಲಾಂಟಿಕದಲ್ಲಿ ಭಾನುವಾರ ಈ ಜಲಂತರ್ಗಾಮಿ ನೌಕೆ ಪ್ರವಾಸಿಗರನ್ನು ಹೊತ್ತು ಸಮುದ್ರದಾಳಕ್ಕೆ ಜಿಗಿದಿದ್ದು ನಂತರ ನಾಪತ್ತೆಯಾಗಿದೆ. ಸಮುದ್ರದಾಳಕ್ಕೆ ಪ್ರವಾಸ ಆರಂಭಿಸಿ ಒಂದು ಮುಕ್ಕಾಲು ಗಂಟೆಯ ನಂತರ ಈ ಅವಘಡ ಸಂಭವಿಸಿದೆ ಎಂದು ಅಮೆರಿಕಾದ ಕೋಸ್ಟ್‌ ಗಾರ್ಡ್‌ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. 

ಟೈಟಾನಿಕ್‌ ಅವಶೇಷಗಳ ವೀಕ್ಷಣೆಗೆ ಅವಕಾಶ ಸೇರಿದಂತೆ  3,800m (12,500 ಅಡಿ) ಆಳ ಸಮುದ್ರದಲ್ಲಿ 8 ದಿನಗಳ ಈ ಪ್ರವಾಸಕ್ಕೆ ಒಬ್ಬರಿಗೆ ತಗಲುವ ವೆಚ್ಚ 250,000 ಡಾಲರ್ ಅಂದರೆ 2,05,11,575 ಭಾರತೀಯ ರೂಪಾಯಿಗಳು. ಇಷ್ಟೊಂದು ವೆಚ್ಚ ಮಾಡಿ ಟೈಟಾನಿಕ್ ಅವಶೇಷಗಳ ನೋಡುವ ಕನಸಿನೊಂದಿಗೆ ತೆರಳಿದ ಪ್ರವಾಸಿಗರನ್ನು ಹೊತ್ತೊಯ್ದ ಜಲಂತರ್ಗಾಮಿ ನೌಕೆ ನಾಪತ್ತೆಯಾಗಿದ್ದು ಎಲ್ಲರಲ್ಲಿ ಆತಂಕ ಮೂಡಿಸಿದೆ. 

Leave a Reply

Your email address will not be published. Required fields are marked *