Share this news

ಕಾರ್ಕಳ : ಮೆಸ್ಕಾಂ ಕಚೇರಿ ಬಳಿ ನಂದಿನಿ ಮಿಲ್ಕ್ ಪಾರ್ಲರ್ ಸ್ಥಾಪನೆಗೆ ಅಕ್ರಮ ಕಟ್ಟಡ ನಿರ್ಮಾಣವಾಗುತ್ತಿದ್ದು ನಿಯಮಬಾಹಿರ ಕಟ್ಟಡದ ಈ ಕುರಿತು ಸೂಕ್ತ ಕ್ರಮ ಜರುಗಿಸುವಂತೆ ಕಾರ್ಕಳ ಪುರಸಭಾ ಸದಸ್ಯರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.


2020 ರಲ್ಲಿ ನಡೆದ ಪುರಸಭೆಯ ಮಾಸಿಕ ಸಭೆಯ ನಿರ್ಣಯದಲ್ಲಿ ಜೈನ್ ಹೋಟೆಲ್ ಮುಂಬಾಗದಲ್ಲಿ ನಂದಿನ ಹಾಲಿನ ಡೈರಿ ನಿರ್ಮಾಣಕ್ಕೆ ಸ್ಥಳಿಯ ಪುರಸಭಾ ಸದಸ್ಯರ ವಿರೋಧದ ನಡುವೆಯೂ ಒಪ್ಪಿಗೆ ನೀಡಲಾಗಿತ್ತು. ಆದರೆ ಈಗ ಅದನ್ನು ಮೆಸ್ಕಾಂ ಕಚೇರಿಯ ಮುಂಭಾಗದಲ್ಲಿರುವ ಮಕ್ಕಳ ಪಾರ್ಕ್ ಬಳಿ ನಿರ್ಮಾಣ ಮಾಡುತ್ತಿದ್ದು ಆ ಜಾಗ ಲೋಕೋಪಯೋಗಿ ಇಲಾಖೆಯ ರಸ್ತೆಯ ವ್ಯಾಪ್ತಿಗೆ ಒಳಪಟ್ಟಿದ್ದು ಇದಕ್ಕೆ ಲೋಕೋಪಯೋಗಿ ಇಲಾಖೆಯ ನಿರಾಕ್ಷೇಪಣಾ ಪತ್ರದ ಅಗತ್ಯವಿದೆ.

ಆದರೆ ನಿರಾಕ್ಷೇಪಣಾ ಪತ್ರ ಪಡೆಯದೆ ಕಟ್ಟಡ ನಿರ್ಮಾಣವಾಗುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಸ್ಥಳೀಯ ಪುರಸಭಾ ಸದಸ್ಯರಾದ ಪ್ರಭಾ ಕಿಶೋರ್ ಕಾರ್ಕಳ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಶುಭದರಾವ್, ಸೀತಾರಾಮ್, ಪ್ರತಿಮಾ, ವಿನ್ನಿಬೋಲ್ಡ್ ಮೆಂಡೋನ್ಸಾ, ಅಜಿತ್ ಹೆಗ್ಡೆ ಮಾಳ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *