ಗದಗ: ಅಪ್ರಾಪ್ತೆಗೆ ಮನೆಭೇಟಿ ಕಾರ್ಯಕ್ರಮದ ನೆಪವೊಡ್ಡಿ ಲೈಂಗಿಕ ಕಿರುಕುಳ ಎಸಗಿದ ಆರೋಪ ಎದುರಿಸುತ್ತಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಐದು ವರ್ಷ ಜೈಲು ಶಿಕ್ಷೆಯನ್ನು ನೀಡಿ ಗದಗ ಜಿಲ್ಲಾ ಕೋರ್ಟ್ ಆದೇಶಿಸಿದೆ.
ಮನೆ ಭೇಟಿ ಕಾರ್ಯಕ್ರಮದ ನೆಪವೊಡ್ಡಿ ಮುಂಡರಗಿಯ ಬಿಇಓ ಎ.ಡಿ ನಗರನವನಾದವ ಶಂಕ್ರಪ್ಪ ಎಂಬುವರು ಲೈಂಗಿಕ ಕಿರುಕುಳವನ್ನು ಅಪ್ರಾಪ್ತ ಬಾಲಕಿಗೆ ನೀಡಿದ್ದರು ಎಂದು ಬಾಲಕಿ ಪೋಷಕರು ನೀಡಿದ್ದ ದೂರಿನ ಮೇರಗೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ಗದಗ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರ ಶೆಟ್ಟಿ ಅವರು, ಆರೋಪಿ ಬಿಇಓ ಎ.ಡಿ ನಗರನವನಾದವ ಶಂಕ್ರಪ್ಪ ಎಂಬಾತನಿಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ ದಂಡವನ್ನು ವಿಧಿಸಿ ಆದೇಶಿಸಿದ್ದಾರೆ. ಒಂದು ವೇಳೆ ಆರೋಪಿ ದಂಡದ ಹಣ ಕೊಡಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 6 ತಿಂಗಳು ಶಿಕ್ಷೆಯನ್ನು ವಿಧಿಸಿದ್ದಾರೆ.
ಮುಂಡರಗಿಯ ಬಿಇಓ ಆಗಿದ್ದಂತ ಎ.ಡಿ ನಗರನವನಾದಬಿ ಅವರು, ಮನೆ ಭೇಟಿ ಕಾರ್ಯಕ್ರಮದ ನೆಪವೊಡ್ಡಿ ಬಾಲಕಿಗೆ ಪಾಠ ಹೇಳುವ ನೆಪದಲ್ಲಿ ಬಾಲಕಿಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು, ನೀನು ನನಗೆ ತುಂಬಾ ಇಷ್ಟ ಆಗಿದ್ದೀಯ. ನಾನು ನಿನಗೆ ಬಹಳದಿನದಿಂದ ಮಾತನಾಡಿಸಬೇಕೆಂದು ಕೊಂಡಿದ್ದೆ. ನೀನು ಯಾರನ್ನಾದರೂ ಮದುವೆಯಾಗು. ನೀನು ನನ್ನನ್ನು ಪ್ರೀತಿಸು ಅಂತ ಲೈಂಗಿಕ ಕಿರುಕುಳ ನೀಡಿರುತ್ತಾರೆ ಎಂದು ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಳು. ಈ ಪ್ರಕರಣದಲ್ಲಿ ನ್ಯಾಯಾಲಯವು ಆರೋಪಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.