Share this news

ಕಾರ್ಕಳ: ಸರಕಾರಿ ಆಸ್ಪತ್ರೆಯಲ್ಲಿನ ಕುಂದುಕೊರತೆಗಳ ಕುರಿತು ಗಮನಹರಿಸುವಂತೆ ಕ್ಷೇತದ ಮತದಾರರೇ ಮನವಿ ಮಾಡಿಕೊಂಡ ಮೇರೆಗೆ ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿಯವರು ಆಸ್ಪತ್ರೆಗೆ ಬೇಟಿ ನೀಡಿದ್ದಾರೆ. ಆ ಸಂದರ್ಭದಲ್ಲಿ ವೈದ್ಯಾದಿಕಾರಿಗಳ ಮತ್ತು ಸಿಬಂದಿಗಳ ಸಭೆ ನಡೆಯುತ್ತಿದ್ದು ಅಲ್ಲಿಗೆ ಅನಿರೀಕ್ಷಿತ ಭೆಟಿ ನೀಡಿ‌ ಅವರನ್ನು ಕುಶಲೋಪರಿಯಾಗಿ ಮಾತನಾಡಿದ್ದಾರೆ. ಅನಂತರ ಆಸ್ಪತ್ರೆಯ ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿ ಅಲ್ಲಿನ‌ ಸಮಸ್ಯೆಯನ್ನು ಮನಗಂಡು ಪರಿಹಾರಕ್ಕೆ ಸರಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದರು.

ಆದರೆ ಇದನ್ನು ಸಹಿಸದ ಬಿಜೆಪಿಯ ಮುಖಂಡರು ಆಸ್ಪತ್ರೆಯಲ್ಲಿ ಕಳೆದುಹೋದ ತಮ್ಮ ‌ಮಾನವನ್ನು ಉಳಿಸಿಕೊಳ್ಳಲು ಇಲ್ಲದ‌‌ ಸಲ್ಲದ ಕಟ್ಟುಕಥೆಯನ್ನು ಕಟ್ಟಿ ವಿರೋಧ ವ್ಯಕ್ತಪಡಿಸುತ್ತಿದ್ದು ವೈಯಕ್ತಿಕ ಟೀಕೆಗಳನ್ನು ಮಾಡುತ್ತಿದ್ದಾರೆ. ಸಾರ್ವಜನಿಕರ ಮನವಿಗೆ ಸ್ಪಂದಿಸಿ ಪರಿಹಾರಕ್ಕೆ ಪ್ರಯತ್ನಿಸಿದರೆ ತುಘಲಕ್ ದರ್ಬಾರ್ ಆಗುವುದೇ? ಗೆದ್ದವರು ಕರ್ತವ್ಯ ಮರೆತು ನಿರ್ಲಕ್ಷ್ಯ ವಹಿಸಿದಾಗ ಸೋತವರು ಸ್ಪಂದಿಸುವುದು ತಪ್ಪೇ? ಕಾಂಗ್ರೆಸ್ ನಿಯೋಗ ಪ್ರತೀ ತಿಂಗಳು ಆಸ್ಪತ್ರೆಗೆ ಬೇಟಿ‌ ನೀಡಿ‌ ಪರಿಶೀಲನೆ ನಡೆಸಲಿದೆ ಬಿಜೆಪಿಯವರಿಗೆ ತಡೆಯುವ ಶಕ್ತಿ ಇದ್ದರೆ ತಡೆಯಿರಿ ಎಂದು ಕಾಂಗ್ರೆಸ್ ವಕ್ತಾರ ಶುಭದ ರಾವ್ ಸವಾಲು ಹಾಕಿದ್ದಾರೆ.

ತಿಂಗಳಿಗೆ 150 ಹೆಚ್ಚು ಹೆರಿಗೆಯಾಗುತ್ತಿದ್ದ ಆಸ್ಪತ್ರೆಯಲ್ಲಿ‌ ಪ್ರಸೂತಿ ವೈದ್ಯರಿಲ್ಲದ ಕಾರಣದಿಂದ ಈಗ ಕೇವಲ 20ಕ್ಕೆ ನಿಂತಿದೆ, ಡಯಾಲಿಸಿಸ್ ಕೇಂದ್ರ, ಮಕ್ಕಳ ಪೌಷ್ಟಿಕಾಂಶ ಕೇಂದ್ರ, ಸ್ಕ್ಯಾನಿಂಗ್ ಕೇಂದ್ರ, ಎಕ್ಸರೇ ಕೇಂದ್ರದ ಮತ್ತು ಡಿ‌ ಗ್ರೂಪ್ ನೌಕರರು ಹೀಗೆ ಒಟ್ಟು 40 ಕ್ಕೂ ಹೆಚ್ಚು ‌ಸಿಬಂದಿಗಳ ಕೊರತೆಯಿಂದ ಸಾರ್ವಜನಿಕರಿಗೆ ಸರಿಯಾದ ಚಿಕಿತ್ಸೆ ‌ಲಭ್ಯವಾಗುತ್ತಿಲ್ಲ, ಈ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೂ ತಮ್ಮ ಸರಕಾರವಿದ್ದರೂ ಸಚಿವರು ಮತ್ತು ‌ಪಕ್ಷದ‌ ಮುಖಂಡರು ಅದಕ್ಕೆ ಪರಿಹಾರ ಕಂಡುಕೊಳ್ಳದೇ ಯಾಕೆ ಮೌನವಹಿಸಿದ್ದರು ಎಂದು ಪ್ರಶ್ನಿಸಿದ್ದಾರೆ.


ಸೋಲು ಗೆಲುವು ಯಾರಿಗೂ ಶಾಶ್ವತವಲ್ಲ ಸೋತಿದ್ದೀರಿ ಎಂದು ಹೀಯಾಳಿಸಬೇಡಿ ನಮ್ಮ ಗೆಲುವು ಅಭೂತಪೂರ್ವವಲ್ಲ ಮಾನ ಉಳಿಸಿದ ಗೆಲುವು ಎಂದು ನಿಮ್ಮ ಹಿರಿಯ‌ ನಾಯಕರೇ ಹೇಳಿದ್ದಾರೆ, ಆದರೆ ನಾವು ಸೋತರೂ ಎರಡು ಖಾತೆಯ ಸಚಿವರಾಗಿದ್ದವರ ಬೆವರಿಳಿಸಿದ್ದೇವೆ ಎನ್ನುವುದು ನೆನಪಿರಲಿ ಎಂದು ಶಾಸಕ ಸುನಿಲ್ ಕುಮಾರ್ ಗೆ ಕುಟುಕಿದ್ದಾರೆ.

ನಿಮ್ಮ ಶಾಸಕರು ಸೋತು ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದೇ ಇದ್ದಾಗ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಕರೆದಿದ್ದಾರೆ, ಹಕ್ಕು ಪತ್ರಗಳನ್ನು ವಿತರಿಸಿದ್ದಾರೆ, ಕೋಟಿ ಚೆನ್ನಯ ಪಾರ್ಕ್ ‌ಉದ್ಘಾಟನೆಯಲ್ಲಿ ಕರೆಯದೇ ವೇದಿಕೆಯಲ್ಲಿ ಕುಳಿತು ಸನ್ಮಾನವನ್ನೂ ಸ್ವೀಕರಿಸಿದ್ದಾರೆ ಅಷ್ಟೇ ಅಲ್ಲದೆ ಬಂಡಿಮಠ ಬಸ್‌ ನಿಲ್ದಾಣದ ಉದ್ಘಾಟನೆಗೆ ಅವರನ್ನು ಅತಿಥಿಯಾಗಿ ಕರೆಯಬೇಕೆಂದು ಮನವಿ ಮಾಡದ್ದು ತಾವೇ ಅಲ್ಲವೇ ಎಂದು ಬಿಜೆಪಿ ವಕ್ತಾರನ್ನು ಕುಟುಕ್ಕಿದ್ದಾರೆ.

‌ಸಾರ್ವಜನಿಕರ ಮನವಿಗೆ ನಮ್ಮ ಸ್ಪಂದನೆ ನಿರಂತರವಾಗಿರುತ್ತದೆ, ಸರಕಾರದಿಂದ ಸಿಗುವ‌ ಸೌಲಭ್ಯಗಳನ್ನು ಅವರಿಗೆ ತಲುಪಿಸುವಲ್ಲಿ ಪ್ರಮಾಣಿಕವಾಗಿ‌ ಪ್ರಯತ್ನ ಮಾಡುತ್ತೇವೆ, ನಮ್ಮ ಜೊತೆ ತಾವು ಕೂಡ ಕೈ ಜೋಡಿಸಿ, ಅನಗತ್ಯ ಹೇಳಿಕೆ‌ ನೀಡುವುದನ್ನು ನಿಲ್ಲಿಸಿ ಎಂದು ಶುಭದರಾವ್ ‌ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *