ಲಂಡನ್:ಸಾಗರದಾಳದಲ್ಲಿ ದುರಂತದಲ್ಲಿ ಮುಳುಗಡೆಯಾಗಿದ್ದ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ತೆರಳಿ ನಾಪತ್ತೆಯಾದ ಜಲಾಂತರ್ಗಾಮಿ ಸ್ಪೋಟಗೊಂಡು ನೌಕೆಯಲ್ಲಿದ್ದ ಐವರು ಸಿಬ್ಬಂದಿಗಳು ಸಾವನ್ನಪ್ಪಿರುವುದುದಾಗಿ ತಿಳಿದುಬಂದಿದೆ.
ಯುಎಸ್ ಕೋಸ್ಟ್ ಗಾರ್ಡ್ ರಿಮೋಟ್ ನಿಯಂತ್ರಿತ ವಾಹನದ ಮೂಲಕ ಸಾಗರದ ಆಳದಲ್ಲಿ ಗುರುವಾರ ಪತ್ತೆಯಾದ ಅವಶೇಷಗಳನ್ನು ಪರಿಶೀಲಿಸಿದ ನಂತರ ಈ ತೀರ್ಮಾನಕ್ಕೆ ಬರಲಾಗಿದೆ. ಟೈಟಾನಿಕ್ ಅವಶೇಷದ ಸ್ಥಳದಿಂದ ಸರಿಸುಮಾರು 1,600 ಅಡಿ (487 ಮೀ) ದೂರದಲ್ಲಿ ಈ ಜಲಾಂತರ್ಗಾಮಿ ನೌಕೆಯ ಭಾಗಗಳು ಗುರುವಾರ ಪತ್ತೆಯಾಗಿವೆ.ಕಳೆದ ಭಾನುವಾರ ಈ ಜಲಾಂತರ್ಗಾಮಿ ನೌಕೆ ನಾಪತ್ತೆಯಾಗಿತ್ತು.ಜಲಾಂತರ್ಗಾಮಿ ನೌಕೆಯಲ್ಲಿ ಐದು ಮಂದಿ ಪ್ರಯಾಣಿಸಿದ್ದರು. ಓಷನ್‌ಗೇಟ್‌ನ (61) ಸಿಇಒ ಸ್ಟಾಕ್‌ಟನ್ ರಶ್, ಬ್ರಿಟಿಷ್-ಪಾಕಿಸ್ತಾನಿ ಉದ್ಯಮಿ ಶಹಜಾದಾ ದಾವೂದ್ (48), ಮತ್ತು ಅವರ ಮಗ ಸುಲೇಮಾನ್(19), ಮತ್ತು ಬ್ರಿಟಿಷ್ ಉದ್ಯಮಿ ಹಮೀಶ್ ಹಾರ್ಡಿಂಗ್(58) ಸೇರಿದ್ದಾರೆ.
ಅಮೆರಿಕ ನೌಕಾಪಡೆಯ ಸಿಬ್ಬಂದಿಗೆ ನಾಪತ್ತೆಯಾಗಿರುವ ಟೈಟಾನಿಕ್ ಜಲಾಂತರ್ಗಾಮಿಯ ಅವಶೇಷಗಳು ಕಾಣಿಸಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಾಪತ್ತೆಯಾಗಿರುವ ಹಡಗಿನಲ್ಲಿ ಆಮ್ಲಜನಕ ಖಾಲಿಯಾಗಿತ್ತು, ಅಲ್ಲಿದ್ದವರಿಗೆ ಉಸಿರಾಡಲು ನಿನ್ನೆ ಸಂಜೆ 7 ಗಂಟೆಯವರೆಗೆ ಸಾಕಾಗುವಷ್ಟು ಮಾತ್ರ ಆಮ್ಲಜನಕವಿತ್ತು.
ಕೆನಡಾದ ನ್ಯೂಫೌಂಡ್ಲ್ಯಾಂಡ್ನ ಕರಾವಳಿಯಿಂದ 400 ಮೈಲಿ ದೂರದಲ್ಲಿ ಟೈಟಾನಿಕ್ ಹಡಗುಗಳ ಅವಶೇಷಗಳಿವೆ. 100 ವರ್ಷಕ್ಕೂ ಹೆಚ್ಚು ಕಾಲದಿಂದ ಸಮುದ್ರದ 12,600 ಅಡಿ ಆಳದಲ್ಲಿ ಟೈಟಾನಿಕ್ ಅವಶೇಷಗಳಿವೆ. 1912ರ ಏಪ್ರಿಲ್ 14ರಂದು ಬೃಹತ್ ಟೈಟಾನಿಕ್ ಹಡಗು ಅಪಘಾತಕ್ಕೀಡಾಗಿತ್ತು, 1,500ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.
ಹಾಗೆಯೇ 700 ಮಂದಿ ಮಾತ್ರ ಪ್ರಾಣ ಉಳಿಸಿಕೊಂಡಿದ್ದರು. 1982ರಲ್ಲಿ ಟೈಟಾನಿಕ್ ಅವಶೇಷಗಳು ಪತ್ತೆಯಾಗಿತ್ತು. ಈಗ ಅದನ್ನು ನೋಡಲು ತೆರಳಿದ್ದ ಜೀವಗಳು ಕೂಡ ನೀರಿನ ಪಾಲಾಗಿವೆ.