ಕಾರ್ಕಳ: ಕುಡಿತದ ಚಟದಿಂದ ಮಾನಸಿಕ ಖಿನ್ನತೆಗೆ ಒಳಗಾದ ಯುವಕ ತನ್ನ ವಾಸದ ಮನೆಯಲ್ಲೇ ನೇಣಿಗೆ ಶರಣಾದ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಮೂರೂರು ಎಂಬಲ್ಲಿನ ರಾಜೀವನಗರದ ನಿವಾಸಿ ಮಂಜುನಾಥ ಪೂಜಾರಿ(36) ಎಂಬವರು ತನ್ನ ವಾಸದ ಮನೆಯಲ್ಲೇ ಗುರುವಾರ ರಾತ್ರಿ ನೇಣಿಗೆ ಶರಣಾಗಿದ್ದಾರೆ.
ಮೃತ ಮಂಜುನಾಥ ಪೂಜಾರಿ ಟೈಲ್ಸ್ ಕೆಲಸ ಮಾಡಿಕೊಂಡಿದ್ದು ಮದ್ಯಪಾನ ಚಟ ಹೊಂದಿದ್ದರು. ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

