ಹೆಬ್ರಿ : ತಾಲೂಕಿನ ಕನ್ಯಾನ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಭವನದಲ್ಲಿ “ಮಿಶ್ರತಳಿ ಹೆಣ್ಣು ಕರುಗಳ ಸಾಕಾಣಿಕ ಯೋಜನೆ”ಯ ಮಾಹಿತಿ ಶಿಬಿರ ಸೋಮವಾರ ಜರುಗಿತು.
ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್ ಶಿಬಿರ ಉದ್ಘಾಟಿಸಿ ಮಾತನಾಡಿ, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ಹಾಲಿನ ಶೇಖರಣೆಯು ಕಡಿಮೆಯಾಗಿದ್ದು, ಗ್ರಾಹಕರ ಬೇಡಿಕೆಯಷ್ಟು ಹಾಲು ಪೂರೈಸಲು ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ 2023 _24 ನೇ ಸಾಲಿನಲ್ಲಿ ಒಕ್ಕೂಟ ವ್ಯಾಪ್ತಿಯಲ್ಲಿ ಜೂನ್.1 ರಿಂದ “ಮಿಶ್ರತಳಿ ಹೆಣ್ಣು ಕರುಗಳ ಸಾಕಾಣಿಕ ಯೋಜನೆ”ಯನ್ನು ಜಾರಿಗೆ ತರಲಾಗಿದ್ದು, ಈ ಬಾರಿ 5,000 ಹೆಣ್ಣು ಕರುಗಳ ಮೂಲಕ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದರು.
ಈ ಯೋಜನೆಯಲ್ಲಿ 11 ದಿನದ ಉತ್ತಮ ಮಿಶ್ರತಳಿ ಹೆಣ್ಣು ಕರು ಅಥವಾ ಉತ್ತಮ ಗುಣಮಟ್ಟದ ದೇಶಿ ಹೆಣ್ಣು ಕರುವನ್ನು (ಸಾಹಿ ವಾಲ್_ಗಿರ್) ಸಂಘದ ವ್ಯಾಪ್ತಿಯಲ್ಲಿ ಸಂಘದ ಸಿಬ್ಬಂದಿಯವರು ಗುರುತಿಸಿ, ಅದನ್ನು ಒಕ್ಕೂಟದ ಪಶುವೈದ್ಯಾಧಿಕಾರಿಗಳ ಶಿಫಾರಸಿನಂತೆ ಆಯ್ಕೆ ಮಾಡಲಾಗುವುದು. ಈ ಯೋಜನೆ ಹೈನುಗಾರಿಕೆಯನ್ನು ಲಾಭದಾಯಕವಾಗಿ ಮುಂದುವರಿಸಲು ಹೈನುಗಾರಿಗೆ ವರದಾನವಾಗಿದೆ ಎಂದರು.
ಕನ್ಯಾನ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಲಕ್ಷೀನಾರಾಯಣ ನಾಯಕ್ ಅಧ್ಯಕ್ಷತೆ ವಹಿಸಿದ್ದು, ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ. ಧನಂಜಯ ಕರು ಸಾಕಾಣಿಕೆ ಬಗ್ಗೆ ಮಾಹಿತಿ ನೀಡಿದರು.
ವಿಸ್ತರಣಾಧಿಕಾರಿ ಮಂಜುನಾಥ್ ಪ್ರಾಸ್ತವಿಕ ಮಾತಾಗಳನ್ನಾಡಿದರು. ಸಂಘದ ಕಾರ್ಯದರ್ಶಿ ಅರುಣ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸAಘದ ನಿರ್ದೇಶಕರು, ಸದಸ್ಯರು, ಯೋಜನೆಯ ಫಲಾನುಭವಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.