ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಜೂನ್ 26ರಂದು ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಕೇಂದ್ರ “ಕೃಷಿಕ ಎಂಟರ್ ಪ್ರೈಸಸ್” ಶುಭಾರಂಭಗೊಳ್ಳಲಿದೆ.
ನಾರಾವಿಯ ಜೈನ್ ಕಂಫರ್ಟ್ಸ್ ವಾಣಿಜ್ಯ ಸಂಕೀರ್ಣದಲ್ಲಿ ನೂತನ ಮಳಿಗೆಯು ಜೂನ್.26ರ ಸೋಮವಾರ ಬೆಳಗ್ಗೆ 10:30ಕ್ಕೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಉದ್ಘಾಟನೆಗೊಳ್ಳಲಿದ್ದು, ಸ್ಥಳೀಯ ಹಿರಿಯ ಪ್ರಗತಿಪರ ರೈತರು ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ.
ನಾರಾವಿ ಸುತ್ತಮುತ್ತಲಿನ ರೈತರಿಗೆ ಬೇಕಾಗಿರುವ ಎಲ್ಲಾ ವಿಧದ ಕೃಷಿ ಹಾಗೂ ತೋಟಗಾರಿಕಾ ಯಂತ್ರೋಪಕರಣಗಳು ಹಾಗೂ ಸಲಕರಣೆಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. ಅಲ್ಲದೇ ಗ್ರಾಹಕರಿಗೆ ಮಾರಾಟದ ನಂತರವೂ ಗುಣಮಟ್ಟದ ಸೇವೆ ಲಭ್ಯವಿದೆ. ರೈತರು ನಮ್ಮ ಸಂಸ್ಥೆಯನ್ನು ಪ್ರೋತ್ಸಾಹಿಸಬೇಕೆಂದು ಸಂಸ್ಥೆಯ ಪಾಲುದಾರರಾದ ಸತೀಶ್ ಮಡಿವಾಳ ನಕ್ರೆ ಹಾಗೂ ಪ್ರದೀಪ್ ಅಂಚನ್ ಸಾಣೂರು ತಿಳಿಸಿದ್ದಾರೆ.