Share this news

ಜೈಪುರ: ಲವ್ ಜಿಹಾದ್ ಭಾರತದಲ್ಲಿ ಗಟ್ಟಿಯಾಗಿ ಬೇರೂರುತ್ತಿದೆ ಅನ್ನೋ ಆರೋಪ ಹೊಸದಲ್ಲ. ಇದೀಗ ಆನ್ ಲೈನ್ ಲವ್ ಜಿಹಾದ್ ಮೂಲಕ ಮತಾಂತರಗೊಳಿಸುವ ಹೊಸ ವಿಧಾನ ದೇಶದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ರಾಜಸ್ಥಾನದಲ್ಲಿ ಹಿಂದೂ ವಿವಾಹಿತ ಮಹಿಳೆಯನ್ನು ಆನ್‌ಲೈನ್ ಗೇಮಿಂಗ್ ಆ್ಯಪ್ ಮೂಲಕ ಮತಾಂತರಗೊಳಿಸಿದ ಆರೋಪ ಕೇಳಿಬಂದಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರಾಜಸ್ಥಾನ ಸೀಕಾರ್ ನಿವಾಸಿಯಾಗಿರುವ ಮಹಿಳೆಯ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಪತಿ ಮನೆಯಲ್ಲಿರುವ ಈಕೆ ಸಮಯ ಕಳೆಯಲು ಆನ್‌ಲೈನ್ ಗೇಮಿಂಗ್ ಆ್ಯಪ್ ನಲ್ಲಿ ತೊಡಗಿಸಿಕೊಂಡಿದ್ದಾಳೆ. ಇದು ಲವ್ ಜಿಹಾದ್‌ಗಾಗಿ ಸಿದ್ಧಪಡಿಸಿರುವ ಆ್ಯಪ್ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಈ ಆನ್‌ಲೈನ್ ಗೇಮಿಂಗ್ ಮೂಲಕ ಈಕೆಗೆ ತಯೀಬ್ ಖಾನ್ ಅನ್ನೋ ಯುವಕನ ಪರಿಚಯವಾಗಿದೆ.ಗೇಮಿಂಗ್ ಆ್ಯಪ್ ಮೂಲಕ ಪರಿಚಯವಾದ ತಯೀಬ್ ಖಾನ್, ಪ್ರೀತಿಯ ನಾಟಕವಾಡಿದ್ದಾನೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಇವರ ಪ್ರೀತಿ ಗಾಢವಾಗಿದೆ. ಇತ್ತ ಪತಿ ಮನೆಯಿಂದ ಸದ್ದಿಲ್ಲದೆ ತವರು ಮನೆಗೆ ತೆರಳಿದ ಈಕೆ, ಸದಾಕಾಲ ತಯೀಬ್ ಖಾನ್ ಜೊತೆ ಫೋನ್‌ನಲ್ಲಿ ಸಂಪರ್ಕದಲ್ಲಿದ್ದಳು. ಪ್ರತಿ ದಿನ ಭೇಟಿ, ಸುತ್ತಾಟ ಆರಂಭಗೊAಡ ಬಳಿಕ ಸದ್ದಿಲ್ಲದೆ ಈಕೆ ಹಿಂದೂಧರ್ಮ ತೊರೆದು ಇಸ್ಲಾಂಗೆ ಮತಾಂತರವಾಗಿದ್ದಾಳೆ ಎನ್ನಲಾಗಿದೆ.

ತವರು ಮನೆಯಲ್ಲಿ ದೇವಸ್ಥಾನಕ್ಕೆ ತೆರಳಲು ಹೋದಾಗ ಈಕೆ ಮಾತ್ರ ಗೈರಾಗುತ್ತಿದ್ದಳು. ಕುಂಕುಮ ಇಡಲು ನಿರಾಕರಿಸುತ್ತಿದ್ದಳು. ಈಕೆಯ ವರ್ತನೆ ಬದಲಾಗಿತ್ತು. ಆಚಾರ ವಿಚಾರ ಬದಲಾಗಿತ್ತು. ಇದರಿಂದ ಅನುಮಾನಗೊಂಡ ಈಕೆಯ ಸಹೋದರ ಪರಿಶೀಲನೆ ನಡೆಸಿದ್ದಾನೆ. ಈ ವೇಳೆ ತಯೀಬ್ ಖಾನ್ ಆನ್‌ಲೈನ್ ಗೇಮ್ ಪತ್ತೆಯಾಗಿದೆ. ತನ್ನ ಸಹೋದರಿಂದ ಇಸ್ಲಾಂಗೆ ಮತಾಂತರವಾಗಿರುವುದು ಪತ್ತೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ಆನ್‌ಲೈನ್ ಗೇಮಿಂಗ್ ಸೇರಿದಂತೆ ಇತರ ಆನ್‌ಲೈನ್ ಆ್ಯಪ್ ಮೂಲಕ ಮತಾಂತರಗೊಳಿಸುವ ಪ್ರಕ್ರಿಯೆ ನಡೆಯುತ್ತಿರುವ ಪ್ರಕರಣಗಳ ಕುರಿತಂತೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

 

Leave a Reply

Your email address will not be published. Required fields are marked *