ಕಾರ್ಕಳ: ಕ್ಷುಲ್ಲಕ ಕಾರಣಕ್ಕಾಗಿ ಗಂಡ ಹೆಂಡತಿ ನಡುವೆ ನಡೆದ ಜಗಳದಲ್ಲಿ ಇಬ್ಬರು ಬಲಿಯಾಗಿರುವ ಘನಘೋರ ಘಟನೆ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಹುರ್ಲಾಡಿ ಎಂಬಲ್ಲಿ ಜೂನ್ 25ರಂದು ಭಾನುವಾರ ಮುಂಜಾನೆ ನಡೆದಿದೆ. ಯಲ್ಲಾಪುರದ ಇಮ್ಯಾನುವಲ್ ಸಿದ್ದಿ(39) ಹಾಗೂ ಯಶೋಧಾ(32) ಸಾವನ್ನಪ್ಪಿರುವ ದಂಪತಿ.
ಘಟನೆಯ ವಿವರ:
ಮೂಲತಃ ಶಿರಸಿ ತಾಲೂಕಿನ ಯಲ್ಲಾಪುರ ಮೂಲದ ಇಮ್ಯಾನುವಲ್ ಹಾಗೂ ಯಶೋಧಾ ದಂಪತಿ ಕಳೆದ 8 ವರ್ಷಗಳಿಂದ ನಲ್ಲೂರಿನ ಹುರ್ಲಾಡಿ ರುಘುವೀರ್ ಶೆಟ್ಟಿ ಎಂಬವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.ಶನಿವಾರ ರಾತ್ರಿ ಟಿವಿ ಮಾರಾಟ ಮಾಡುವ ವಿಚಾರದಲ್ಲಿ ಗಂಡ ಹೆಂಡತಿ ನಡುವೆ ಜಗಳವಾಗಿತ್ತು. ಬಳಿಕ ಇಮ್ಯಾನುವಲ್ ಟಿವಿಯನ್ನು ಮಾರಾಟ ಮಾಡಲು ಪ್ಯಾಕ್ ಮಾಡಿ ಇಟ್ಟಿದ್ದ. ಭಾನುವಾರ ಮುಂಜಾನೆ ಟಿವಿ ಮಾರಾಟದ ವಿಚಾರಕ್ಕೆ ಪತ್ನಿ ಯಶೋಧಾ ಮತ್ತೆ ಗಂಡನ ಜತೆ ಜಗಳವಾಡಿದ್ದಳು. ಇದರಿಂದ ಇವರಿಬ್ಬರ ನಡುವೆ ಜಗಳ ವಿಕೋಪಕ್ಕೆ ತಿರುಗಿ ಯಶೋಧಾ ಸಿಟ್ಟಿಗೆದ್ದು ಏಕಾಎಕಿ ವಾಸವಿದ್ದ ಮನೆಯ ಸಮೀಪದ ತೋಟದ ಕೆರೆಗೆ ಹಾರಿದ್ದನ್ನು ಕಂಡು ಇಮ್ಯಾನುವಲ್ ಸಿದ್ದಿ ಪತ್ನಿಯನ್ನು ರಕ್ಷಿಸಲು ತಾನೂ ಕೆರೆಗೆ ಹಾರಿದ್ದ. ಮೊದಲೇ ಕೆರೆಗೆ ಹಾರಿದ್ದ ಯಶೋಧಾ ನೀರಿನಲ್ಲಿ ಮುಳುಗಿ ಮೃತಪಟ್ಟರೆ ಇತ್ತ ಇಮ್ಯಾನುವಲ್ ಸಿದ್ದಿ ಕೂಡ ಮೇಲೆ ಬರಲಾಗದೇ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.
ಅನಾಥರಾದ ಮಕ್ಕಳು:
ಗಂಡಹೆAಡಿರ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಮಾತಿನಂತೆ ದಂಪತಿಗಳು ಜೀವನ ನಡೆಸಬೇಕೆಂಬ ನಾಣ್ನುಡಿಯಿದ್ದರೂ ಕೇವಲ ಕ್ಷÄಲ್ಲಕ ಕಾರಣಕ್ಕಾಗಿ ಇಬ್ಬರು ಪಟ್ಟ ಮಕ್ಕಳ ಮುಖವನ್ನೂ ನೋಡದೇ ಅವರನ್ನು ಅನಾಥರನ್ನಾಗಿಸಿದ್ದಾರೆ. ಹೊರಪ್ರಪಂಚದ ಬಗ್ಗೆ ಏನೂ ಅರಿಯದ 10 ವರ್ಷ ಪ್ರಾಯದ ಗಂಡು ಹಾಗೂ 9 ವರ್ಷದ ಹೆಣ್ಣು ಮಗು ಅಪ್ಪ ಅಮ್ಮನನ್ನು ಕಳೆದುಕೊಂಡು ಅಕ್ಷರಶಃ ಅನಾಥರಾಗಿದ್ದಾರೆ. ಇತ್ತ ಅಪ್ಪಮ್ಮನನ್ನು ಕಳೆದುಕೊಂಡ ಪುಟ್ಟ ಮಕ್ಕಳಿಗೆ ನಲ್ಲೂರು ಸರ್ಕಾರಿ ಶಾಲೆಯ ಶಿಕ್ಷಕರಾದ ನಾಗೇಶ್ ಸಾಂತ್ವಾನ ಹೇಳಿದರು.
ಇತ್ತ ಗಂಡಹೆAಡತಿ ಇಬ್ಬರ ಶವಗಳು ಸುಮಾರು 15 ಅಡಿ ಆಳದ ಕೆರೆಯ ನೀರಿನಲ್ಲಿ ಮುಳುಗಿದ್ದರಿಂದ ಶವವನ್ನು ಸ್ಥಳೀಯರು ಪೊಲೀಸರ ಸಮ್ಮುಖದಲ್ಲಿ ಮೇಲಕ್ಕೆತ್ತಿದ್ದಾರೆ. ನಲ್ಲೂರು ಗ್ರಾಮ ಪಂಚಾಯಿತಿ ಸದಸ್ಯರಾದ ಸುಮಿತ್ ನಲ್ಲೂರು ಹಾಗೂ ಲೋಕೇಶ್ ಶೆಟ್ಟಿ, ಸ್ಥಳೀಯರಾದ ಪ್ರಶಾಂತ್ ನಲ್ಲೂರು, ಹರಿಪ್ರಸಾದ್, ನಾರಾಯಣ ಗೌಡ, ಶಿವಣ್ಣ ನಲ್ಲೂರು ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ.
ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಗ್ರಾಮಾಂತರ ಠಾಣೆಯ ಎಸ್‌ಐ ತೇಜಸ್ವಿ, ಪೇದೆಗಳಾದ ಪ್ರಕಾಶ್, ಸುಭಾಸ್ ಕಾಮತ್ ಹಾಗೂ ಸುಂದರ ಗೌಡ ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಒಟ್ಟಿನಲ್ಲಿ ಕೋಪದ ಕೈಗೆ ಬುದ್ದಿಕೊಟ್ಟ ದಂಪತಿಗಳು ತಾವು ಪ್ರಾಣತೆತ್ತು ಮಕ್ಕಳಿಬ್ಬರು ಬೀದಿಪಾಲು ಮಾಡಿರುವುದು ಮಾತ್ರ ದುರಂತ.