ಮೂಡಬಿದಿರೆ : ಮೂಡಬಿದಿರೆ ಯುವವಾಹಿನಿ, ಐಐಎಫ್‌ಎಲ್ ಫೈನಾನ್ಸ್ ಮೂಡಬಿದಿರೆ ಮತ್ತು ಆಳ್ವಾಸ್ ಹೆಲ್ತ್ ಸೆಂಟರ್ ಮೂಡಬಿದಿರೆ ಅವರ ಜಂಟಿ ಆಶ್ರಯದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರವು ಜೂ.25ರಂದು ಮೂಡಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಿತು.
ಮಾಜಿ ಸಚಿವರಾದ ಅಭಯಚಂದ್ರ ಜೈನ್ ಶಿಬಿರ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಳ್ವಾಸ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ,ವಿನಯ್ ಆಳ್ವ, ಯುವವಾಹಿನಿ ಅಧ್ಯಕ್ಷರಾದ ಸುಶಾಂತ್ ಕರ್ಕೇರಾ, ಐಐಎಫ್‌ಎಲ್ ಫೈನಾನ್ಸ್ ನ ತೊಮಸ್ ವಿ.ಟಿ, ಸಿಬ್ಬಂದಿ ವರ್ಗ ,ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.