Share this news

ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ಎರಡು ಕೋಮುಗಳ ಯುವಕರ ಮಧ್ಯೆ ಹೊಡೆದಾಟ ನಡೆದ ಘಟನೆ ಶಿವಮೊಗ್ಗದ ಟಿಪ್ಪು ನಗರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಗೋಪಾಳ ವಿನಾಯಕ ಸರ್ಕಲ್‌ನಲ್ಲಿ ಶೇಷಣ್ಣ ಎಂಬವರ ಬೈಕಿನ ಆಟೋ ಬಾಬು ಎಂಬಾತನ ರಿಕ್ಷಾ ತಾಗಿದೆ ಎಂಬ ಕಾರಣಕ್ಕಾಗಿ ಬಜರಂಗದಳದ ಕಾರ್ಯಕರ್ತರಾದ ಜಿತೇಂದ್ರ ಮತ್ತು ಸಂದೇಶ ಹಾಗೂ ಮಂದಿ ಮುಸ್ಲಿಂ ಸಮುದಾಯದ ಹುಡುಗರ ನಡುವೆ ಮಾತಿನ ಚಕಮಕಿ ನಡೆದಿದ್ದು ವಿಕೋಪಕ್ಕೆ ತಿರುಗಿ ಅಲ್ಲಿನ ಗುಂಪು ಸೇರಿಕೊಂಡು ಇಟ್ಟಿಗೆ ಮತ್ತು ಕೈಯಿಂದ ಸಂದೇಶ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಲ್ಲಿ ಸಂದೇಶ್ ಕಣ್ಣಿಗೆ ಪೆಟ್ಟಾಗಿದ್ದು ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಪ್ರಕರಣದಲ್ಲಿ ಹಲ್ಲೆಗೊಳಗಾಗಿದ್ದ ಗಾಯಳು ಸಂದೇಶ್‌ನನ್ನು ನೋಡಲು ಆಸ್ಪತ್ರೆಗೆ ಬಂದಿದ್ದ ವಿಜಯ್ ಕುಮಾರ್ ಎಂಬಾತನ ಮೇಲೆ ಹಲ್ಲೆಯಾಗಿರುವ ಮತ್ತೊಂದು ಘಟನೆ ನಡೆದಿದೆ. ವಿಜಯ್ ಕುಮಾರ್‌ಗೆ ತಾರ್ಸೀ ಎಂಬಾತ ಕರೆ ಮಾಡಿ ದ್ರೌಪದಮ್ಮ ಸರ್ಕಲ್ ಬಳಿ ಬರಲು ತಿಳಿಸಿದ್ದಾನೆ. ತಾರ್ಸೀ ನನ್ನು ಕಾಣಲು ಸ್ನೆಹಿತನೊಂದಿಗೆ ಹೋಗಿದ್ದ ವಿಜಯ್ ಕುಮಾರ್ ನನ್ನು ತಾರ್ಸೀ ಹಾಗೂ ಆತನ ಗೆಳೆಯರು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ವಿಜಯ್ ಕುಮಾರ್‌ಗೆ ತಾರ್ಸೀ ಚಾಕುವಿನಿಂದ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆಯಲ್ಲಿ ಗಾಯಾಳು ವಿಜಯ್ ಕುಮಾರ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಡ್ಡಪೇಟೆ ಹಾಗೂ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.

 

ಎರಡು ಕೋಮಿನ ಯುವಕರ ಮಧ್ಯೆ ಹೊಡೆದಾಟ ಹಾಗೂ ಚಾಕು ಇರಿತದ ಪ್ರಕರಣದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಹೊರ ಜಿಲ್ಲೆಗಳಿಂದಲೂ ಶಿವಮೊಗ್ಗ ನಗರಕ್ಕೆ ಪೊಲೀಸರು ಆಗಮಿಸಿದ್ದಾರೆ. ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಮಾರ್ಗದರ್ಶನದಲ್ಲಿ ಶಿವಮೊಗ್ಗ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.ಸೋಮವಾರ ಬೆಳಗ್ಗೆ 10:30 ಕ್ಕೆ ಶಿವಮೊಗ್ಗಕ್ಕೆ ಎಡಿಜಿಪಿ ಹಿತೇಂದ್ರ ಕುಮಾರ್ ಆಗಮಿಸಲಿದ್ದು, ಈಗಾಗಲೇ ಶಿವಮೊಗ್ಗದಲ್ಲಿ ಐಜಿಪಿ ತ್ಯಾಗರಾಜನ್ ಮೊಕ್ಕಾಂ ಹೂಡಿದ್ದಾರೆ. ಕಳೆದ ರಾತ್ರಿಯಿಂದಲೇ ಶಿವಮೊಗ್ಗದನ ಪ್ರಮುಖ ಕೋಮುಸೂಕ್ಷö್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Leave a Reply

Your email address will not be published. Required fields are marked *