ನವದೆಹಲಿ : ಕೇಂದ್ರ ಸರ್ಕಾರವು 3 ಆಯ್ದ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರವನ್ನು ಸರ್ಕಾರ ಶೇ.0.3 ರವರೆಗೆ ಹೆಚ್ಚಳ ಮಾಡಿದೆ. ಜುಲೈನಿಂದ ಆರಂಭವಾಗುವ ತ್ರೈಮಾಸಿಕ ಕ್ಕೆ ಈ ಬಡ್ಡಿ ದರ ಅನ್ವಯವಾಗಲಿದ್ದು, ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಕೊಂಚ ಸಮಾಧಾನ ನೀಡಿದೆ.
5 ವರ್ಷಗಳ ಆರ್‌ಡಿ ಮೇಲೆ ಶೇ. 0.3 ರಷ್ಟು ಬಡ್ಡಿದರ ಏರಿಸಲಾಗಿದ್ದು, ಇನ್ನು ಮುಂದೆ ಆರ್‌ಡಿ ಹೊಂದಿರುವವರು ಶೇ. 6.2ರ ಬದಲಿಗೆ ಶೇ. 6.5 ರಷ್ಟು ಬಡ್ಡಿ ಪಡೆದುಕೊಳ್ಳಲಿದ್ದಾರೆ. ಅಲ್ಲದೇ ಅಂಚೆ ಕಚೇರಿಗಳಲ್ಲಿನ 1 ಹಾಗೂ 2 ವರ್ಷದ ಅವಧಿಯ ಠೇವಣಿಯ ಮೇಲಿನ ಬಡ್ಡಿದರವನ್ನು ಶೇ.0.1ರಷ್ಟು ಹೆಚ್ಚಳ ಮಾಡಲಾಗಿದೆ. ಹಾಗಾಗಿ 1 ವರ್ಷದ ಎಫ್‌ಡಿ ಬಡ್ಡಿ ಶೇ. 6.9ಕ್ಕೆ ಹಾಗೂ 2 ವರ್ಷದ ಎಫ್‌ಡಿ ಬಡ್ಡಿ ಶೇ. 7ಕ್ಕೆ ಹೆಚ್ಚಳವಾಗಿದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದ ಮೇಲಿನ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯನ್ನು ತಂದಿಲ್ಲ. ಇದು ಜುಲೈ 1ರಿಂದ ಸೆಪ್ಟೆಂಬರ್ 30ರವರೆಗೆ ಶೇ. 7.7ರಲ್ಲೇ ಮುಂದುವರೆಯಲಿದೆ. ಹಾಗೆಯೇ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರವೂ ಸಹ ಶೇ. 8, ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು ಕಿಸಾನ್ ವಿಕಾಸ್ ಪತ್ರದ ಮೇಲಿನ ಬಡ್ಡಿದರ ಕ್ರಮವಾಗಿ ಶೇ. 8.2 ಮತ್ತು ಶೇ. 7.5ರಷ್ಟೆ? ಇರಲಿದೆ. ಕಳೆದ ತ್ರೆöÊಮಾಸಿಕಗಳಲ್ಲೂ ಸಹ ಬಡ್ಡಿದರವನ್ನು ಏರಿಕೆ ಮಾಡಲಾಗಿತ್ತು.