ಮೂಡಬಿದಿರೆ : ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಶನಿವಾರ ಸಮಾಜ ಮಂದಿರದಲ್ಲಿ ಮಾಧ್ಯಮ ಹಬ್ಬ ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಅಂಕುಡೊಂಕು ತಿದ್ದುವ, ಸಮರ್ಥವಾಗಿ ಜನರಿಗೆ ಮಾಹಿತಿ ನೀಡುವ ಕೆಲಸ ಪತ್ರಕರ್ತರು ಮಾಡಬೇಕಾಗಿದೆ ಎಂದರು.
ವಿಶ್ರಾಂತ ಪತ್ರಕರ್ತ ಸದಾನಂದ ಹೆಗಡೆಕಟ್ಟೆ ಅವರು ರಜತ ಸಂಭ್ರಮಕ್ಕೆ ಚಾಲನೆ ನೀಡಿ ಪರೋಪಕಾರದೊಂದಿಗೆ ನಡೆಸುವ ಜೀವನ ಸಾರ್ಥಕವೆನಿಸುತ್ತದೆ ಎಂದರು.
ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷ ಯಶೋಧರ ವಿ.ಬಂಗೇರ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕಳೆದ 13 ವರ್ಷಗಳಿಂದ ನವ್ಯವಾಣಿ ಪತ್ರಿಕೆಯನ್ನು ನಡೆಸುತ್ತಾ ಬಂದಿರುವ ಸಂಪಾದಕ ಪಾರ್ಶ್ವನಾಥ ಜೈನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಜಯ ಕರ್ನಾಟಕ ಪತ್ರಿಕೆಯ ಮಂಗಳೂರು ಸ್ಥಾನೀಯ ಸಂಪಾದಕ ಬಿ.ರವೀಂದ್ರ ಶೆಟ್ಟಿ ಅವರು ಪ್ರಚಲಿತ ಪತ್ರಿಕೋದ್ಯಮ ವಿಷಯದ ಕುರಿತು ದತ್ತಿ ಉಪನ್ಯಾಸ ನೀಡಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.
ಪ್ರೆಸ್ ಕ್ಲಬ್ ಸ್ಥಾಪಕಾಧ್ಯಕ್ಷ ರೇಮಂಡ್ ತಾಕೊಡೆ ಅವರು ಮಾತನಾಡಿದರು.
ಉದ್ಯಮಿ ಶ್ರೀಪತಿ ಭಟ್ ಪ್ರೆಸ್ ಕ್ಲಬ್ ಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಗೌರವಿಸಲಾಯಿತು.
ಧನಂಜಯ ಮೂಡುಬಿದಿರೆ ಪ್ರಾರ್ಥಸಿದರು. ಯಶೋಧರ ಬಂಗೇರ ಸ್ವಾಗತಿಸಿದರು. ಕೋಶಾಧಿಕಾರಿ ಗಣೇಶ್ ಕಾಮತ್ ಸನ್ಮಾನ ಪತ್ರ ವಾಚಿಸಿದರು. ಉಪಾಧ್ಯಕ್ಷ ಸೀತಾರಾಮ ಆಚಾರ್ಯ ಅತಿಥಿಯನ್ನು ಪರಿಚಯಿಸಿದರು. ಕಾರ್ಯದರ್ಶಿ ಪ್ರೇಮಶ್ರೀ ಕಲ್ಲಬೆಟ್ಟು ವಂದಿಸಿ, ವೇಣುಗೋಪಾಲ್ ಕಾರ್ಯಕ್ರಮ ನಿರೂಪಿಸಿದರು.
ಸದಸ್ಯರಾದ ಹರೀಶ್ ಕೆ. ಅದೂರು, ಪ್ರಸನ್ನ ಹೆಗ್ಡೆ, ನವೀನ್ ಸಾಲ್ಯಾನ್, ಅಶ್ರಫ್ ವಾಲ್ಪಾಡಿ, ಜೈಸನ್ ತಾಕೊಡೆ, ಶರತ್ ದೇವಾಡಿಗ, ಪುನೀತ್ ಸಹಕರಿಸಿದರು.