ಕಾರ್ಕಳ: ಹಿಂದೂ ಜಾಗರಣ ವೇದಿಕೆ ಹೊಸ್ಮಾರು ವಲಯದ ವತಿಯಿಂದ 3ನೇ ವರ್ಷದ “ನೆತ್ತರ ನೆರವು” ರಕ್ತದಾನ ಶಿಬಿರವು ಹೊಸ್ಮಾರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಭಾನುವಾರ ನಡೆಯಿತು.ಹೊಸ್ಮಾರು ವಿಜಯ ಕ್ಲಿನಿಕ್ ನ ಡಾ. ಪ್ರಸಾದ್. ಬಿ .ಶೆಟ್ಟಿ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ರಕ್ತದಾನ ಎನ್ನುವುದು ಒಂದು ಜೀವ ಉಳಿಸುವ ಮಹಾದಾನ,ಅಪಘಾತಗಳಂತಹ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆಯಿರುವ ಹಿನ್ನಲೆಯಲ್ಲಿ ಎಲ್ಲರೂ ಸ್ವಯಂಪ್ರೇರಿತರಾಗಿ ರಕ್ತದಾನ ನೀಡುವ ಮೂಲಕ ಮಾನವೀಯ ಗುಣಗಳನ್ನು ಬೆಳಸಿಕೊಳ್ಳಬೇಕೆಂದರು.
ಕರ್ನಾಟಕ ರಾಜ್ಯ ಫೆಡರೇಶನ್ ಕ್ವಾರಿ ಸ್ಟೋನ್ ಕೃಷರ್‌ನ ರಾಜ್ಯಾಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಬಜಗೋಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ರಕ್ತದಾನ ಶಿಬಿರದಲ್ಲಿ ಸುಮಾರು 132 ಜನ ರಕ್ತದಾನ ಮಾಡಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ವಸಂತ ಭಟ್, ಹಿಂದೂ ಜಾಗರಣ ವೇದಿಕೆಯ ತಾಲೂಕು ಸಂಚಲಕರಾದ ಗುರುಪ್ರಸಾದ್, ತುಳು ಸಂಘದ ಅಧ್ಯಕ್ಷ ವಿಷುಶ್ರೀ ಕೇರ, ರಾಜೇಶ್ ಪೇರಲ್ಕೆ ,ರತೀಶ್ ಕುಮಾರ್, ಸಂಜೀವ ಪೂಜಾರಿ ,ಡಾ. ವೀಣಾ, ತಾ.ಪಂ ಮಾಜಿ ಸದಸ್ಯೆ ಮಂಜುಳಾ, ಗ್ರಾಮ ಪಂಚಾಯತ್ ಸದಸ್ಯರಾದ ನಯನ, ಹಿಂದೂ ಮುಖಂಡರಾದ ಪ್ರವೀಣ್ ಕುಮಾರ್ ಶೆಟ್ಟಿ ಜಾಗರಣ ವೇದಿಕೆ ಹೊಸ್ಮಾರು ವಲಯ ಅಧ್ಯಕ್ಷ ರಾಜೇಶ್ ಆಚಾರ್ಯಉಪಸ್ಥಿತರಿದ್ದರು.
ಅಶೋಕ್ ಎಂ .ಕೆ ಸ್ವಾಗತಿಸಿ ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿದರು.