ನವದೆಹಲಿ: ಕರ್ನಾಟಕ ಸೇರಿದಂತೆ 5 ರಾಜ್ಯಗಳ ಬಿಜೆಪಿ ರಾಜ್ಯಾಧ್ಯಕ್ಷರ ಅವಧಿ ಅಂತ್ಯಗೊAಡಿದೆ. ಹೀಗಾಗಿ ನೂತನ ರಾಜ್ಯಾಧ್ಯಕ್ಷರ ಆಯ್ಕೆಗೆ ಹಲವು ಸುತ್ತಿನ ಕಸರತ್ತು ನಡೆದಿದ್ದು, ಇದೀಗ ಅಂತಿಮ ಪಟ್ಟಿ ರೆಡಿ ಮಾಡಲಾಗಿದೆ. ಇಂದು ಸಂಜೆಯೊಳಗೆ 5 ರಾಜ್ಯಗಳಿಗೆ ನೂತನ ಬಿಜೆಪಿ ಸಾರಥಿಗಳನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕರ್ನಾಟಕದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಗೂ ಮೊದಲು ವಿಪಕ್ಷ ನಾಯಕ ಘೋಷಣೆ ಬಾಕಿ ಇದೆ. ಈ ಕುರಿತು ಬಿಎಸ್ ಯಡಿಯೂರಪ್ಪನವರನ್ನು ದೆಹಲಿಗೆ ಕರೆಯಿಸಿಕೊಂಡು ಮಾತುಕತೆ ನಡೆಸಲಾಗಿದೆ. ಕರ್ನಾಟಕ, ಗುಜರಾತ್, ಮದ್ಯಪ್ರದೇಶ, ತೆಲಂಗಾಣ, ಪಂಜಾಬ್ ರಾಜ್ಯಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕವಾಗಬೇಕಿದೆ. ಇದರಲ್ಲಿ ನಾಲ್ಕು ರಾಜ್ಯಗಳ ರಾಜ್ಯಾಧ್ಯಕ್ಷರ ಪಟ್ಟಿ ಅಂತಿಮಗೊAಡಿದೆ. ಆದರೆ ಕರ್ನಾಟಕದ ಆಯ್ಕೆಯಲ್ಲಿ ಕೆಲ ಗೊಂದಲಗಳು ಏರ್ಪಟ್ಟಿದೆ. ಮಳೆಗಾಲದ ಅಧಿವೇಶನ ಆರಂಭಗೊAಡರೂ ಸಮರ್ಥ ವಿಪಕ್ಷ ನಾಯಕರಿಲ್ಲದೆ ಬಿಜೆಪಿ ತೀವ್ರ ಮುಜುಗರ ಅನುಭವಿಸಿದೆ. ಹೀಗಾಗಿ ಕರ್ನಾಟಕದಲ್ಲಿ ಮೊದಲು ವಿಪಕ್ಷ ನಾಯಕನ ಆಯ್ಕೆ ಬಳಿಕ ರಾಜ್ಯಾಧ್ಯಕ್ಷರ ನೇಮಕವಾಗಲಿದೆ ಎನ್ನಲಾಗಿದೆ.
ಕರ್ನಾಟಕಕಕ್ಕೆ ಶೋಭಾಕರಂದ್ಲಾಜೆ ಅಥವಾ ಅಶ್ವಥ್ ನಾರಾಯಣ್ ಬಿಜೆಪಿ ರಾಜ್ಯಾಧ್ಯಕ್ಷೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳುತ್ತಿವೆ. ಹೈಕಮಾಂಡ್ ಕೂಡ ಶೋಭಾ ಕರಂದ್ಲಾಜೆಯನ್ನು ರಾಜ್ಯಧ್ಯಕ್ಷೆ ಮಾಡಲು ಸಮ್ಮತಿಸಿದೆ. ಇತ್ತ ಯಡಿಯೂರಪ್ಪ ಬಣ ಕೂಡ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗುತ್ತಿದೆ. ಬಸವರಾಜ್ ಬೊಮ್ಮಾಯಿಯನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಯಡಿಯೂರಪ್ಪ ಬಣ ಹೊರತುಪಡಿಸಿ ಇನ್ನುಳಿದ ನಾಯಕರು ಸಮ್ಮತಿಸಿಲ್ಲ ಎನ್ನು ಗುಮಾನಿಯಿದೆ. ಅಶ್ವತ್ಥ್ ನಾರಾಯಣ್ ಕೂಡ ಬಿಜೆಪಿ ರಾಜ್ಯಧ್ಯಕ್ಷ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಪೈಪೋಟಿ ಜೋರಾಗಿದೆ.